ಕುಂದಾಪುರ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಗುಲ್ವಾಡಿ ಟಾಕೀಸ್ ನೀಡುವ 2023 ನೇ ಸಾಲಿನ ಪ್ರತಿಷ್ಠಿತ ಕನ್ನಡದ ಮೊದಲ ಸಾಮಾಜಿಕ ಕಾದಂಬರಿಯ ಪಿತಾಮಹ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿಗೆ ನಿವೃತ್ತ ಪೊಲೀಸ್ ಅಧಿಕಾರಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಪುರಸ್ಕೃತ ಜಿ.ಎ. ಬಾವ ಮತ್ತು ಕನ್ನಡದ ಹಿರಿಯ ಪತ್ರಕರ್ತ ಸಂತೋಷ ಕುಮಾರ ಗುಲ್ವಾಡಿ ಪ್ರಶಸ್ತಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಿರಿಯ ಸಾಹಿತಿಗಳು,ವಿಮರ್ಶಕರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಸ್ಮರಣ ಫಲಕಗಳನ್ನು ಒಳಗೊಂಡಿದೆ.

ತಮ್ಮ ಕರ್ತವ್ಯದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಉದಯ ಗಾಂವಕಾರ ( ಶಿಕ್ಷಣ), ಡಾ.ಪ್ರಕಾಶ ತೊಳಾರ್( ಮನೋ ವೈದ್ಯ), ಹಾಜಿ.ತೌಫೀಕ್ ಅಬ್ದುಲ್ಲಾ( ಸಮಾಜ ಸೇವೆ), ಜಾನ್ ಡಿಸೋಜಾ(ಪತ್ರಿಕೋದ್ಯಮ), ರವಿಕಿರಣ ಮುರ್ಡೇಶ್ವರ (ಕಾನೂನು), ಡಾ. ಆದರ್ಶ ಹೆಬ್ಬಾರ ( ವೈದ್ಯಕೀಯ),
ಮೊಹಮ್ಮದ ರಫಿ ಪಾಷ (ಆಡಳಿತ), ವಾಸುದೇವ ಗಂಗೇರ ( ರಂಗ ಭೂಮಿ), ದಸ್ತಗೀರ್ ಸಾಹೇಬ್ ( ಸಮಾಜ ಸೇವೆ) ಇವರನ್ನು ವಿಶೇಷವಾಗಿ ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ.
ಡಿಸೆಂಬರ್ 24, ಭಾನುವಾರ ಸಂಜೆ 5.30 ಕ್ಕೆ ಕೊಟೇಶ್ವರದ ಯುವ ಮೆರೀಡಿಯನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ, ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಹಿರಿಯ ಪತ್ರಕರ್ತ ದಿನೇಶ ಅಮೀನ್ ಮಟ್ಟು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಪ್ರಶಾಂತ ಕುಂದರ್, ಬ್ರಿಸ್ಟಲ್ ಕನ್ನಡಿಗ ಯೊಗೀಂದ್ರ ಮರವಂತೆ, ಡಾ. ಉಮೇಶ ಪುತ್ರನ್, ಬೈಲೂರು ಉದಯ ಕುಮಾರ ಶೆಟ್ಟಿ, ವಿನಯ ಕುಮಾರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದು ಗುಲ್ವಾಡಿ ಗ್ರಾಮಸ್ಥರ ಹಿತರಕ್ಷಣ ವೇದಿಕೆ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಗುಲ್ವಾಡಿ ಟಾಕೀಸಿನ ಯಾಕೂಬ್ ಖಾದರ್ ಗುಲ್ವಾಡಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.