ಕರಾವಳಿ

ಕೊಲ್ಲೂರು ದೇವಳದ ನವರಾತ್ರಿ ಉತ್ಸವ ರಥದ ಹೂವಿನ ಅಲಂಕಾರ ಕೆಲಸಕ್ಕೆ ಬಂದ ವ್ಯಕ್ತಿ ಕಾಣೆ

Pinterest LinkedIn Tumblr

ಕೊಲ್ಲೂರು: ತಮಿಳುನಾಡಿನಿಂದ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನವರಾತ್ರಿಯ ರಥದ ಹೂವಿನ ಅಲಂಕಾರ ಕೆಲಸ ಮಾಡಲು ಬಂದ ವ್ಯಕ್ತಿ ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ.

ತಮಿಳುನಾಡು ತಿರುವಣಮಲೈ ಮೂಲದ ಷಣ್ಮುಗಂ ಕೆ. (70) ಕಾಣೆಯಾದ ವ್ಯಕ್ತಿ.

ಅ.22ರಂದು ವಿಜಯ ರಾಜ್ ಎಲ್. ಎನ್ನುವರ ಜೊತೆ ಷಣ್ಮುಗಂ ಕೆ. ಕೊಲ್ಲೂರು ದೇವಸ್ಥಾನದ ತೇರಿನ ಹೂ ಅಲಂಕಾರ ಕೆಲಸಕ್ಕೆ ಬಂದಿದ್ದು ಅ.23 ಮುಂಜಾನೆ ಹೊತ್ತಿಗೆ ಷಣ್ಮುಗಂ ಕೆ. ಅವರು ತನಗೆ ಸುಸ್ತಾಗುತ್ತಿದೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿ ಕೊಲ್ಲೂರು ದೇವಸ್ಥಾನದ ವಸತಿ ಗೃಹಕ್ಕೆ ಬಂದಿದ್ದು ಬಳಿಕ ವಸತಿ ಗೃಹದಲ್ಲಿ ಇಲ್ಲದೇ ಕಾಣೆಯಾಗಿದ್ದಾರೆ. ಅವರ ಕಡೆಯವರು ದೇವಸ್ಥಾನದ ಒಳಗೆ ಮತ್ತು ವಠಾರದಲ್ಲಿ ,ಕೊಲ್ಲೂರಿನ ಬಸ್ ನಿಲ್ದಾಣ ,ಗೊಯಂಕಾ ಜಂಕ್ಷನ್, ದಳಿ, ಸೌಪರ್ಣಿಕ ನದಿ ತೀರದ ಆಸುಪಾಸಿನಲ್ಲಿ ಹುಡುಕಾಡಿದ್ದು ಈವರೆಗೆ ಪತ್ತೆಯಾಗಿಲ್ಲ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ:
ಕೋಲು ಮುಖ, ಗೋದಿ ಮೈಬಣ್ಣ, ಎತ್ತರ-5.6 ಇಂಚು, ತಿಳಿ ಹಳದಿ ಬಣ್ಣದ ಅರ್ಧ ಕೈ ಶರ್ಟ್, ಕೆಂಪು ಬಣ್ಣದ ಲುಂಗಿ ಧರಿಸಿದ್ದರು.

 

Comments are closed.