ಕರಾವಳಿ

ಹಂಗಳೂರು-ಬಡಾಕೆರೆ ಶಾಲೆ: ಕೋಟೇಶ್ವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

Pinterest LinkedIn Tumblr

ಕುಂದಾಪುರ: ಪಠ್ಯೇತರ ಚಟುವಟಿಕೆ ಹೊರತಾಗಿ ಮಕ್ಕಳ ಪ್ರತಿಭೆ ಗುರುತಿಸುವುದು ಪ್ರತಿಭಾ ಕಾರಂಜಿ ಉದ್ದೇಶವಾಗಿದ್ದು ತಮ್ಮಲ್ಲಿರುವ ವಿವಿಧ ಸಾಂಸ್ಕೃತಿಕ, ಕಲಾ ಚಟುವಟಿಕೆಗಳ ಜೊತೆಗೆ ಬರವಣಿಗೆ, ಭಾಷಣ ಪ್ರಬುದ್ಧತೆ ಹೊರಹಾಕಲು ಈ ಕಾರ್ಯಕ್ರಮದ ಮೂಲಕ‌ ಸಾಧ್ಯವಿದೆ ಎಂದು ಹಂಗಳೂರು ಗ್ರಾ.ಪಂ ಸದಸ್ಯ ಸುಧಾಕರ ಪೂಜಾರಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯದ ಆಶ್ರಯದಲ್ಲಿ ಶುಕ್ರವಾರ ಹಂಗಳೂರು ಬಡಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೋಟೇಶ್ವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023-24 ಉದ್ಘಾಟಿಸಿ ಅವರು ಮಾತನಾಡಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜು ಬಿಲ್ಲವ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕಲು ಇರುವ ಉತ್ತಮ ವೇದಿಕೆ ಪ್ರತಿಭಾ ಕಾರಂಜಿಯಾಗಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ದಾನಿಗಳಿಂದ ಕೊಡಲ್ಪಟ್ಟ ಸಮವಸ್ತ್ರ ಹಾಗೂ ಪರಿಕರಗಳನ್ನು ವಿತರಿಸಲಾಯಿತು. ಶಾಲೆಗೆ ಡಯಾಸ್ ಕೊಡುಗೆ ನೀಡಿದ ಉದಯ್ ಆಚಾರ್ ಹಂಗಳೂರು ಅವರನ್ನು ಸನ್ಮಾನಿಸಲಾಯಿತು.

ಎಸ್.ಡಿ.ಎಂ.ಸಿ ಅಧ್ಯಕ್ಷ ರವೀಂದ್ರ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯ ರೋಷನ್ ಬೆರೆಟ್ಟೋ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಕುಂದಾಪುರ ಗಣೇಶ್ ಕುಮಾರ್ ಶೆಟ್ಟಿ, ಕೋಟೇಶ್ವರ ವ್ಯಾಪ್ತಿ ಬಿ.ಆರ್.ಪಿ ಶಂಕರ್ ಕುಲಾಲ್, ಕುಂದಾಪುರ ಬಿ.ಆರ್.ಪಿ ಸುಕನ್ಯಾ, ಪ್ರಭಾರ ಸಿ.ಆರ್.ಪಿ ಪ್ರಕಾಶ್ ಜೋಗಿ, ದಾನಿ ಸತ್ಯನಾರಾಯಣ ಶೆಟ್ಟಿ, ಸೈಂಟ್ ಪಿಯುಸ್ ರೋಮನ್ ಕ್ಯಾಥೋಲಿಕ್ ಚರ್ಚ್ ಅಧ್ಯಕ್ಷ ಅಲೆಕ್ಸಾಂಡರ್ ಇದ್ದರು.

ಕೋಟೇಶ್ವರ ವಲಯದ ಶಿಕ್ಷಣ ಸಂಯೋಜಕ ಸಂತೋಷ್ ಕುಮಾರ್ ಪ್ರಸ್ತಾವನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಟಿ. ಸೀತಾರಾಮ್ ಶೆಟ್ಟಿ‌ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಮ ಕೆ. ನಿರೂಪಿಸಿದರು. ಸಹಶಿಕ್ಷಕಿ ಶ್ಯಾಮಲಾ ಕೆ. ವಂದಿಸಿದರು.

 

Comments are closed.