ಕುಂದಾಪುರ: ವೇಗವಾಗಿ ಬಂದ ಕಾರು ಮತ್ತೊಂದು ಕಾರನ್ನು ಓವರ್ಟೇಕ್ ಮಾಡುವ ಬರದಲ್ಲಿ ಆಟೋಗೆ ಡಿಕ್ಕಿಯಾದ ಪರಿಣಾಮ ಪಲ್ಟಿಯಾದ ರಿಕ್ಷದಲ್ಲಿದ್ದ ಯುವತಿ ದಾರುಣವಾಗಿ ಮೃತಪಟ್ಟ ಘಟನೆ ಸೆ.1 ಶುಕ್ರವಾರ ಕಂದಾವರ ಗ್ರಾಮದ ಮೂಡ್ಲಕಟ್ಟೆ ಕಂಬಳಗದ್ದೆ ಸಮೀಪದ ನಡೆದಿದೆ.

ಕುಂದಾಪುರ ತಾಲೂಕಿನ ಅಂಪಾರು ನಿವಾಸಿ ಅಂಬಿಕಾ (22) ಮೃತ ದುರ್ದೈವಿ.
ಘಟನೆ ವಿವರ: ಶುಕ್ರವಾರ ಮಧ್ಯಾಹ್ನ ಅಂಬಿಕಾ ಹಾಗೂ ಇತರರು ಕುಂದಾಪುರದ ಸಂಬಂಧಿಕರ ಮನೆಯಿಂದ ಅಂಪಾರಿಗೆ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಮತ್ತೊಂದು ಕಾರನ್ನು ಓವರ್ಟೇಕ್ ಮಾಡಲು ಹೋಗಿ ಆಟೋಗೆ ಡಿಕ್ಕಿ ಯಾಗಿದೆ. ಇದರಿಂದ ಆಟೋ ಪಲ್ಟಿಯಾಗಿದ್ದು ರಿಕ್ಷಾದಲ್ಲಿದ್ದ ಅಂಬಿಕಾ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಶಾಂತರಾಮ ಅವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾದಲ್ಲಿದ್ದ ಮತ್ತೊಬ್ಬರಿಗೆ ಕೂಡ ಗಾಯಗಳಾಗಿದೆ. ಆರೋಪಿ ಕಾರು ಚಾಲಕನನ್ನು ವಸಂತ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.