ಕುಂದಾಪುರ: ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ (ರಿ) ಇದರ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಬೀಜಾಡಿಯವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆ.20 ಭಾನುವಾರ ನಗರದ ನಾರಾಯಣಗುರು ಸಭಾಭವನದಲ್ಲಿ ಜರುಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಶೋಕ ಪೂಜಾರಿ ಬೀಜಾಡಿ ಅವರನ್ನು ಅಧ್ಯಕ್ಷರನ್ನಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ಮರು ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಗಣೇಶ ವಿಠಲವಾಡಿ ಮರು ಆಯ್ಕೆಗೊಂಡಿದ್ದಾರೆ.
ಕಳೆದ ಬಾರಿ 2021 ಮಾ.7 ಭಾನುವಾರ ನಡೆದ ಸಭೆಯಲ್ಲಿ ಅಶೋಕ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದು ಅಂದಿನಿಂದ ನಿತ್ಯ ಸಂಘದ ಕಚೇರಿಗೆ ಆಗಮಿಸಿ ಸಮಾಜದ ಪರವಾಗಿ ನಿಂತಿದ್ದು, ವಿದ್ಯಾರ್ಥಿವೇತನ, ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ, ಶ್ರೀ ನಾರಾಯಣಗುರು ಎಜುಕೇಶನ್ & ಕಲ್ಚರಲ್ ಟ್ರಸ್ಟ್ ಕುಂದಾಪುರದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ‘ಸಿಇಟಿ ತರಬೇತಿ ಶಿಬಿರ’ ಮೊದಲಾದ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಅಶೋಕ್ ಪೂಜಾರಿ ಮತ್ತೆ ಅಧ್ಯಕ್ಷರಾಗಬೇಕು ಎಂಬುದು ಉಡುಪಿ ಜಿಲ್ಲೆಯ 2 ಪ್ರತಿಷ್ಟಿತ ವಿಧಾನಸಭಾ ಕ್ಷೇತ್ರವಾದ ಕುಂದಾಪುರ ಹಾಗೂ ಬೈಂದೂರು ಭಾಗದ ಬಿಲ್ಲವ ಸಮುದಾಯದ ಅಭಿಪ್ರಾಯವಾಗಿತ್ತು. ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡಿರುವ ಅಶೋಕ್ ಪೂಜಾರಿ ಸಹಕಾರಿ ವ್ಯವಸ್ಥೆ, ಸಂಘಟನೆ ಹಾಗೂ ರಾಜಕೀವಾಗಿ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಅಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಈ ಹಿಂದೆ ಕುಂದಾಪುರ ತಾ.ಪಂ ಸದಸ್ಯರಾಗಿದ್ದ ಅವರು ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸತತ 17 ವರ್ಷದಿಂದ ನಿರ್ದೇಶಕರಾಗಿ, ಎರಡನೇ ವರ್ಷದ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಬೀಜಾಡಿ ಮೀನುಗಾರರ ಸಹಕಾರಿ ಸಂಘದಲ್ಲಿ ಪ್ರಸ್ತುತ ನಿರ್ದೇಶಕರಾಗಿದ್ದಾರೆ.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ 2ನೇ ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಪೂಜಾರಿ ಬೀಜಾಡಿ ಅವರಿಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅಭಿನಂದಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.