ಕರಾವಳಿ

ಬೀಜಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ, ಉಪಾಧ್ಯಕ್ಷರಾಗಿ ರಜಿನಿ ಜ್ಯೂಲಿ‌ ಅವಿರೋಧ ಆಯ್ಕೆ

Pinterest LinkedIn Tumblr

ಕುಂದಾಪುರ: ಬೀಜಾಡಿ ಗ್ರಾಮ ಪಂಚಾಯತ್‌ನ 2ನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪ್ರಕಾಶ್ ಪೂಜಾರಿ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಜಿನಿ ಜ್ಯೂಲಿ ಅವಿರೋಧವಾಗಿ ಆಯ್ಕೆಯಾದರು.

ಬೀಜಾಡಿ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು 16 ಸ್ಥಾನಗಳಿದ್ದು ಈ ಪೈಕಿ ಬಿಜೆಪಿ ಬೆಂಬಲಿತ 10 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ 6 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಈ ಬಾರಿಯ 2ನೇ ಅವಧಿಗೆ ಚುನಾವಣೆಯಲ್ಲಿ ಸರಕಾರದ ನಿಯಮಗಳಂತೆ ಅಧ್ಯಕ್ಷ ಪಟ್ಟ ಹಿಂದುಳಿದ ವರ್ಗ ‘ಅ’ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ‘ಬಿ’ ಮಹಿಳೆಗೆ ಮೀಸಲಾತಿ ಪ್ರಕಟವಾಗಿದ್ದು ಈ 2 ಹುದ್ದೆಗಳು ಯಾವುದೇ ಗೊಂದಲಗಳಿಲ್ಲದೇ ಅವಿರೋಧವಾಗಿ ಆಯ್ಕೆಯಾಯಿತು.

ತಾಲೂಕು ಯುವಜನ ಮತ್ತು ಸೇವಾ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಚುನಾವಣಾಧಿಕಾರಿಯಾಗಿ ಚುನಾವಣಾ ಕ್ರಮಗಳನ್ನು ನಡೆಸಿಕೊಟ್ಟರು. ಪಂಚಾಯತ್‌ನ ನಿಕಟ ಪೂರ್ವಧ್ಯಕ್ಷೆ ಸುಮತಿ ನಾಗರಾಜ್ ಮತ್ತು ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.