ಉಡುಪಿ: ಚಿಕ್ಕೋಡಿಯಲ್ಲಿ ಜೈನ ಮುನಿಗಳ ಭೀಕರ ಹತ್ಯೆ ರಾಜ್ಯ ಮಾತ್ರವಲ್ಲದೆ ದೇಶವನ್ನೇ ಆತಂಕಕ್ಕೆ ದೂಡಿದೆ. ಆರ್ಥಿಕ ಸಹಕಾರವನ್ನು ಒದಗಿಸಿ ಕರುಣೆ ಮೆರೆದ ಪರಮ ಸಂತರನ್ನೇ ಈ ರೀತಿ ಹತ್ಯೆ ಮಾಡಿರುವುದು ಮಾನವ ಕುಲವೇ ತಲೆತಗ್ಗಿಸುವ ವಿಷಯವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಈ ವಿಚಾರವಾಗಿ ಸರ್ಕಾರ ಹಾಗೂ ಸ್ಥಳೀಯ ಶಾಸಕರ ಮೌನ ಅಚ್ಚರಿ ಮೂಡಿಸಿದೆ. ಹತ್ಯೆಗೈದ ಆರೋಪಿಗಳನ್ನು ಕೆಲವೇ ಕ್ಷಣಗಳಲ್ಲಿ ಬಂಧಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು. ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ. ಜೀವನದುದ್ದಕ್ಕೂ ಶಾಂತಿ, ಅಹಿಂಸೆಯ ಸಂದೇಶ ಸಾರುತ್ತಾ ಬದಕುವ ಸಂತರಿಗೆ ಸರ್ಕಾರ ಭದ್ರತೆ ಒದಗಿಸಬೇಕು ಎಂದಿದ್ದಾರೆ.
Comments are closed.