ಪ್ರಮುಖ ವರದಿಗಳು

ನೂತನ ಸಂಸತ್ ಭವನದ ವಿಡಿಯೋ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ: ಮೇ.28 ಭಾನುವಾರ ಉದ್ಘಾಟನೆ

Pinterest LinkedIn Tumblr

ನವದೆಹಲಿ: ನೂತನ ಸಂಸತ್ ಭವನದ ವಿಡಿಯೋ ತುಣುಕೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದು, ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ ಎಂದು ಹೇಳಿದ್ದಾರೆ.

ತಮ್ಮ ಟ್ವೀಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಮೋದಿ, ‘ನಮ್ಮ ಸಂಸತ್ ನಮ್ಮ ಹೆಮ್ಮೆ’ಎಂಬ ಹ್ಯಾಶ್‌ಟ್ಯಾಗ್ ಬಳಸಿ ತಮ್ಮ ಧ್ವನಿಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದಾರೆ.

ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ. ಈ ವೀಡಿಯೊ ಭವ್ಯ ಕಟ್ಟಡದ ನೋಟವನ್ನು ನೀಡುತ್ತದೆ. ಇದನ್ನು ನಿಮ್ಮ ಸ್ವಂತ ಧ್ವನಿಯೊಂದಿಗೆ ಹಂಚಿಕೊಳ್ಳಿ, ಅವುಗಳಲ್ಲಿ ಕೆಲವು ನಾನು ಮರು ಟ್ವೀಟ್ ಮಾಡುತ್ತೇನೆ.

ಮೇ.28 ಭಾನುವಾರ ಬೆಳಗ್ಗೆ ಸಾಂಪ್ರಾದಾಯಿಕ ಪೂಜೆ, ಪುನಸ್ಕಾರಗಳೊಂದಿಗೆ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದ್ದು, ಸರ್ವ ಧರ್ಮ ಪ್ರಾರ್ಥನೆ ನಂತರ ಪ್ರಧಾನಿ ಮೋದಿಯವರು ಉದ್ಘಾಟನೆ ನೆರವೇರಿಸಲಿದ್ದಾರೆ. 25 ಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, 20 ವಿರೋಧ ಪಕ್ಷಗಳು ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿವೆ ಎನ್ನಲಾಗಿದೆ.

Comments are closed.