ಉಡುಪಿ: ಮೀನುಗಾರಿಕಾ ಬೋಟೊಂದು ಪಾರಂಪಳ್ಳಿ ಪಡುಕರೆ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ ತೇಲಿ ಬಂದ ಬಲೆಯು ಬೋಟಿನ ಪ್ಯಾನಿಗೆ ಸಿಲುಕಿದ ಪರಿಣಾಮ ಬೋಟ್ ನ ಇಂಜಿನ್ ಸ್ಥಬದ್ದಗೊಂಡು ಗಾಳಿಯ ರಭಸಕ್ಕೆ ಮರಳು ದಿಬ್ಬಕ್ಕೆ ಬಡಿದು ಮುಳುಗಲಾರಂಭಿಸಿದ ಘಟನೆ ನಡೆದಿದೆ.
ಬೆಂಗ್ರೆ ನಿವಾಸಿ ಸಂದೀಪ್ ತೋಳಾರ್ ಮಾಲೀಕತ್ವದ ಶ್ರೀ ದುರ್ಗಾಪರಮೇಶ್ವರಿ ರುಕ್ಮಯ್ಯ ಹೆಸರಿನ ಬೋಟ್ ಇದಾಗಿದ್ದು ಅವಘಡದ ವೇಳೆ ಅಕ್ಕಪಕ್ಕದ ಬೋಟ್ ಗಳು ಸಹಾಯಕ್ಕೆ ಬಂದರೂ ಕೂಡ ಪ್ರಯೋಜನವಾಗಿಲ್ಲ.
ಬೋಟಿನಲ್ಲಿದ್ದ ಕಾರ್ಮಿಕರನ್ನ ಸುರಕ್ಷಿತವಾಗಿ ಬೇರೆ ಬೋಟಿನವರು ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ
ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಹಾಗೂ ಮೀನುಗಾರಿಕೆ ಪರಿಕರಗಳು ಬೋಟಿನೊಂದಿಗೆ ಮುಳುಗಡೆಯಾಗಿದ್ದು ಸುಮಾರು ಅಂದಾಜು 12 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
Comments are closed.