ಕರಾವಳಿ

ಪುತ್ತೂರಿ‌ನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಭೇಟಿ

Pinterest LinkedIn Tumblr

ಪುತ್ತೂರು: ಬ್ಯಾನರ್ ವಿಚಾರವಾಗಿ ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ ವಿಚಾರವಾಗಿ ಪೊಲೀಸರ ಅಮಾನವೀಯ ಕೃತ್ಯ ಸಮಾಜವೇ ತಲೆ ತಗ್ಗಿಸುವಂಥದ್ದು ಯಾವುದೇ ಆರೋಪಿಗಳನ್ನು ಥಳಿಸುವ ಹಕ್ಕು ಪೊಲೀಸರಿಗೆ ಇಲ್ಲವೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿ, ಹೋರಾಟ, ಸಂಘರ್ಷ ಇರುತ್ತದೆ. ಆದರೆ, ದೂರು ಬಂದಾಗ ತನಿಖೆ ಮಾಡಬೇಕು, ಹೊಡೆಯೋ ಅಧಿಕಾರ ಇಲ್ಲ. ಇವರು ಕೊಲೆ ಮಾಡಿಲ್ಲ, ದೇಶ ವಿರೋಧಿ ಕೆಲಸ ಮಾಡಿಲ್ಲ. ಈ ಬಗ್ಗೆ ತನಿಖೆ ಆಗಬೇಕು, ಕೆಳ ಹಂತದ ಸಿಬ್ಬಂದಿ ಜೊತೆ ಡಿವೈಎಸ್ಪಿ ಮೇಲೂ ಕ್ರಮ ಆಗಬೇಕು. ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ತುಂಬಾ ಸವಾಲಿದೆ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಮಾರಣಹೋಮ ಆಗಿತ್ತು, ಇದೀಗ ಮತ್ತೆ ಅದೇ ನಾಯಕತ್ವದ ಸರ್ಕಾರ ಬಂದಿದೆ. ಇದರಿಂದ ನಮ್ಮ ಕಾರ್ಯಕರ್ತರಿಗೆ ಭಯ ಮತ್ತು‌ ಅನಾಥ ಪ್ರಜ್ಞೆ ಮೂಡುತ್ತಿದೆ. ಹಿಂದೂಗಳು ಯಾರಿಗೂ ತೊಂದರೆ ಕೊಡುವವರಲ್ಲ, ಯಾವುದೇ ಧರ್ಮದ ವಿರುದ್ದ ಅಲ್ಲ, ನಮ್ಮ ಹೋರಾಟ ಹಿಂದುತ್ವಕ್ಕಾಗಿ ಎಂದಿದ್ದಾರೆ.

ಕೆಲವೊಂದು ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಬಂತೆಂದು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದರೆ ಅಂಥದ್ದನ್ನ ಸಹಿಸಲ್ಲ. ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಬೇರೆ ಅಲ್ಲ. ದೇಶದಲ್ಲಿ ಹಿಂದೂಗಳ ರಕ್ಷಣೆ ಮಾಡೋದು ಬಿಜೆಪಿ ಕೆಲಸ. ಘಟನೆ ಮತ್ತು ಇಲ್ಲಿನ ಕಾರ್ಯಕರ್ತರ ಭಾವನೆಯನ್ನು ಕೇಂದ್ರದ ನಾಯಕರಿಗೆ ಹೇಳುತ್ತೇನೆ. ಯಾವಾಗಲೂ ನಿಮ್ಮ ಜೊತೆಗೆ ಇರ್ತೇನೆ. ನಾನು ಬಂದ ಕ್ಷೇತ್ರವೂ‌ ಮುಸ್ಲಿಂ ಬಾಹುಳ್ಯದ ಪ್ರದೇಶ ಈ ಘಟನೆಯಲ್ಲಿ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರು ಅನ್ನೋ ಭಾವನೆ ಬೇಡ. ಇದಕ್ಕೆ ಕೆಲವೇ ದಿನಗಳಲ್ಲಿ ನಿಮ್ಮ ‌ಮನಸ್ಸಿನಲ್ಲಿ ಇರೋದಕ್ಕೆ ತಕ್ಕ ನಿರ್ಣಯ ಪಕ್ಷ ತೆಗೆದುಕೊಳ್ಳಲಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ.

ಯಾರೂ ನೋವು ಪಡಬೇಡಿ, ಪಕ್ಷದಿಂದ ಆದ ನೋವನ್ನ ಸರಿ ಪಡಿಸುವ ಕೆಲಸ ಪಕ್ಷದ ಹೈಕಮಾಂಡ್ ಮಾಡಲಿದೆ.
ರಾಜ್ಯಾಧ್ಯಕ್ಷರ ಹತ್ರ ನಿನ್ನೆ ಮಾತನಾಡಿದೆ, ಹಂಗಾಮಿ ಸಿಎಂ ಬೊಮ್ಮಾಯಿ ಕೂಡ ಡಿಜಿಪಿ ಜೊತೆ‌ ಮಾತನಾಡಿದ್ದಾರೆ. ಅವರು ಪ್ರಯತ್ನ ಮಾಡ್ತಾ ಇದ್ದಾರೆ, ಇದು ನಮಗೆ ನೋವು ತರುವ, ತಲೆ ತಗ್ಗಿಸೋ ವಿಷಯ, ಅವರು ನಾವು ಬೇರೆ ಬೇರೆ ಅಲ್ಲ, ಅವರೂ ಪಕ್ಷದ ಕಾರ್ಯಕರ್ತರೇ, ಕಾರಣಾಂತರಗಳಿಂದ ಮತ್ತು ಪಕ್ಷದ ಕೆಲ ನಿರ್ಣಯಗಳಿಂದ ಮನಸ್ಸಿಗೆ ನೋವಾಗಿರುತ್ತೆ. ಚುನಾವಣೆ ಟಿಕೆಟ್ ವಿಚಾರದಲ್ಲಿ ಆದ ಅಸಮಾಧಾನದಿಂದ ಹೀಗಾಗಿದೆ ಎಂದಿದ್ದಾರೆ.ಜನ ಅದಕ್ಕೂ ಗೌರವ ಕೊಡಬೇಕು, ಅರುಣ್ ಕುಮಾರ್ ಅವರಿಗೂ ಹೆಚ್ಚು ಮತ ಬಂದಿದೆ. ಅವರ ಮೇಲೆಯೂ ಗೌರವ ಇದೆ, ಇದು ಪೂರ್ತಿ ಕೇಂದ್ರದ ಗಮನಕ್ಕೆ ಬಂದಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಪಕ್ಷ ಒಳ್ಳೆಯ ರೀತಿಯಲ್ಲಿ ಸ್ಪಂದಿಸಲಿದೆ. ನಮ್ಮ ಒಳ ಜಗಳ, ವೈಯಕ್ತಿಕ ಪ್ರತಿಷ್ಠೆ ಕಾರಣಕ್ಕೆ ಪುತ್ತೂರಿನಲ್ಲಿ ಸೋಲಾಗಿದೆ. ಮುಂದಿನ ದಿನಗಳು ನಮಗೆ ಕಠಿಣ ಇದೆ, ಅದಕ್ಕೆ ನಾವು ತಯಾರಾಗಬೇಕು. ಇನ್ನೊಂದಿಷ್ಟು ಕಾರ್ಯಕರ್ತರ ಮೇಲೆ ಹಲ್ಲೆ ಆಗಬಹುದು, ಎಲ್ಲರೂ ಆತ್ಮಾವಲೋಕನ ಮಾಡಿ ತಪ್ಪಿದ್ರೆ ಕ್ಷಮೆ ಕೇಳಬೇಕು. ಜೊತೆಗೆ ಇಲ್ಲಿ ಪೊಲೀಸರು ‌ಕಾನೂನು ಕೈಗೆತ್ತಿಕೊಂಡಿದ್ದಾರೆ. ಯಾರೇ ಹೇಳಿದ್ರೂ ಮಾಡಬಾರದು, ಯಾರದ್ದೇ ಸರ್ಕಾರ, ಮುಖ್ಯಮಂತ್ರಿ ಇದ್ದರೂ ಕಾನೂನಿನ ಒಳಗೆ ಇರಬೇಕು. ಈ ಸರ್ಕಾರ ಹಿಂದೂ ವಿರೋಧಿಯಾದರೆ ನಾವು ಸುಮ್ಮನಿರಲ್ಲ ಎಂದರು.

Comments are closed.