ಬೈಂದೂರು: ದೇಶದಲ್ಲಿ ಜನಸಾಮಾನ್ಯರು ಸೇರಿದಂತೆ ನಾಗರೀಕರಿಗೆ ಯೋಗ್ಯವಾದ ನೂರಾರು ಯೋಜನೆಗಳು ಜಾರಿಗೆ ತರುವ ಮೂಲಕ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ವಿಶ್ವದಲ್ಲಿ ಭಾರತವನ್ನು ಅಗ್ರಗಣ್ಯವಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ. ಹಾಗೂ ಅಭಿವೃದ್ದಿಯಲ್ಲಿ ಡಬ್ಬಲ್ ಇಂಜಿನ್ ಬಿಜೆಪಿ ಸರಕಾರ ಇತಿಹಾಸ ನಿರ್ಮಿಸಿದೆ. ಬೈಂದೂರಿನಲ್ಲಿ ಬಿಜೆಪಿ ಜಯಗಳಿಸುವ ಉದ್ದೇಶದಿಂದ ಸಂಘಟಿತರಾಗಿ ಕೆಲಸ ಮಾಡಬೇಕು ಮತ್ತು ಸಾಮಾನ್ಯ ಕಾರ್ಯಕರ್ತನು ಶಾಸಕನಾಗಿ ಆಯ್ಕೆಯಾಗಬೇಕು ಎಂದು ಮಹಾರಾಷ್ಟ್ರ ರಾಜ್ಯದ ವಿಧಾನಪರಿಷತ್ ಸದಸ್ಯ ಪ್ರವೀಣ್ ದಾರೇಕರ್ ಹೇಳಿದರು.

ಬೈಂದೂರು ಬಿಜೆಪಿ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲದ ಉಪಾಧ್ಯಕ್ಷ ಗಣೇಶ್ ಹಾಜರಿದ್ದರು.
Comments are closed.