ಪ್ರಮುಖ ವರದಿಗಳು

ನಮೊ ಮೋಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ನಿಧಿ ಸಂಗ್ರಹ ಕಾರ್ಯಕ್ರಮ

Pinterest LinkedIn Tumblr

ಮುಂಬಯಿ: ನಮೊ ಮೋಯರ್ ಗ್ಲೋಬಲ್ ಫೌಂಡೇಶನ್ ಅಲ್ಪಾವಧಿಯಲ್ಲಿ ಮಾಡಿದ ಸಾಧನೆ ಬಗ್ಗೆ ತಿಳಿದು ಸಂತೋಷವಾಗಿದೆ. ಈ ಸಂಸ್ಥೆಯು ಕೇವಲ ತನ್ನ ಸಮಾಜವನ್ನು ಮಾತ್ರ ಗಮನದಲ್ಲಿಡದೇ ದೇಶದ ಇತರೆಡೆ ಅಸಾಯಕರಾಗಿರುವ ಇತರ ಸಮುದಾಯದ ಜನರಿಗೆ ಸಹಕರಿಸುತ್ತಿದ್ದು ಇದಕ್ಕೆ ಉತ್ತಮ ಭವಿಷ್ಯವಿದೆ. ಒಗ್ಗಟ್ಟನ್ನು ಕಾಪಾಡುದರೊಂದಿಗೆ ಈ ಸಂಸ್ಥೆಯನ್ನು ಉನ್ನತ ಮಟ್ಟಕ್ಕೇರಿಸುವಂತಾಗಬೇಕು ಎಂದು ಭವಾನಿ ಗ್ರೂಪ್ ಆಫ್ ಕಂಪನೀಸ್ ಮತ್ತು ಭವಾನಿ ಫೌಂಡೇಶನ್ ನ ಅಧ್ಯಕ್ಷ ಕೆ.ಡಿ ಶೆಟ್ಟಿ ಅವರು ನುಡಿದರು.

ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಕರಾವಳಿ ಕನ್ನಡಿಗರಾದ ಮೋಯಾ ಸಮಾಜದ ಸಂಘಟನೆಯಾದ ನಮೊ ಮೋಯರ್ ಗ್ಲೋಬಲ್ ಫೌಂಡೇಶನ್ ಮತ್ತು ವಿ ಆರ್ ಮ್ಯೂಸಿಕ್ ಫಾರ್ ಎ ಕೋಸ್ ಇದರ ಜಂಟಿ ಆಶ್ರಯದಲ್ಲಿ ‘ಸಾಝ್’ ಸಂಗೀತ ನಿಧಿ ಸಂಗ್ರಹ ಕಾರ್ಯಕ್ರಮ ಎ. 2ರಂದು ಸಂಜೆ ಗೋಪಾಲ್ ಶರ್ಮ ಇಂಟರ್ನ್ಯಾಷನಲ್ ಸ್ಕೂಲ್ ಆಡಿಟೋರಿಯಂ , ಪೊವಾಯಿ ಇಲ್ಲಿ ಜರಗಿದ್ದು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ನಮೊ ಮೋಯರ್ ಗ್ಲೋಬಲ್ ಫೌಂಡೇಶನ್ ಗೆ ತನ್ನ ಪ್ರೋತ್ಸಾಹವನ್ನು ವ್ಯಕ್ತಪಡಿಸಿದರು.

ಫೌಂಡೇಶನ್ ನ ಅಧ್ಯಕ್ಷರಾದ ರವಿ ಉಚ್ಚಿಲ್ ಮಾತನಾಡುತ್ತಾ ಕಳೆದ ಹತ್ತು ತಿಂಗಳಲ್ಲಿ ನಮ್ಮ ಸಂಸ್ಥೆಯು 45 ಕಾರ್ಯಚಟುವಟಿಕೆಗಳನ್ನು ನಡೆಸಿದೆ. ಮಹಾರಾಷ್ಟ್ರದ ರಿಮೋಟ್ ಪ್ರದೇಶಕ್ಕೂ ಬೇಟಿ ನೀಡಿದ್ದು ಅಲ್ಲಿನ ಜನ ಸಾಮಾನ್ಯರ ಪಡುತ್ತಿರುವ ಕಷ್ಟಗಳನ್ನು ಅರಿತು ನಮ್ಮಿಂದಾದ ಸಹಾಯವನ್ನು ಮಾಡಿದ್ದೇವೆ. ಎಲ್ಲರ ಸಹಾಯದಿಂದ ಸತ್ಯದ ಹಾದಿಯಲ್ಲಿ ಮುಂದುವರಿಯುತ್ತಾ ಸಮಾಜ ಸೇವೆಯಲ್ಲಿ ನಮೊ ಮೋಯರ್ ಗ್ಲೋಬಲ್ ಫೌಂಡೇಶನ್ ಯಸಸ್ಸನ್ನು ಕಾಣುತ್ತಿದೆ ಎಂದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಶುರೆನ್ಸ್ ಕಂಪನಿ ಇದರ ತಂತ್ರಜ್ಞಾನ ಸೇವೆಗಳ ಮುಖ್ಯಸ್ಥ ಮೋಹನ್ ಶೆಟ್ಟಿಯವರು ನಮೊ ಮೋಯರ್ ಗ್ಲೋಬಲ್ ಫೌಂಡೇಶನ್ ಜನ ಸಾಮಾನ್ಯರ ಸೇವೆ ನಿಜಕ್ಕೂ ಅಭಿನಂದನೀಯ. ಈ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು ಎಲ್ಲರೂ ಸಹಕರಿಸಬೇಕು ಮಾತ್ರವಲ್ಲದೆ ನಾನು ನನ್ನ ಸಂಪರ್ಕದಲ್ಲಿರುವವರಿಗೂ ಸಹಕರಿಸುವಂತೆ ಮಾಡಲು ಪ್ರಯತ್ನಿಸುವೆನು ಎಂದರು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ನವೀನ್ ಶೆಟ್ಟಿಯವರು ಮಾತನಾಡುತ್ತಾ ಹೊಸ ರಾಜಕೀಯ ಪಕ್ಷಗಳನ್ನು ಹುಟ್ಟು ಹಾಕುದಕ್ಕಿಂತ ಇಂತಹ ಫೌಂಡೇಶನ್ ನ್ನು ಸ್ಥಾಪಿಸಿದಲ್ಲಿ ಅದು ಅನೇಕರಿಗೆ ಪ್ರಯೋಜನಕಾರಿಯಾಗಬಹುದು ಎನ್ನುತ್ತಾ ಶುಭ ಹಾರೈಸಿದರು.

ಜೀವನ್ ಜ್ಯೋತಿ ಟ್ರಸ್ಟ್ ನ ಸಂಸ್ಥಾಪಕರಾದ ಹರಕ್ಚಂದ್ ಸಾವ್ಲಾ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು. ಫೌಂಡೇಶನ್ ಮುಖ್ಯ ಸಲಹೆಗಾರರಾದ ಈಶ್ವರ್ ಕೆ. ಐಲ್ , ದಿನೇಶ್ ಶೆಟ್ಟಿ, ಕರ್ನೂರು ಮೋಹನ್ ರೈ, ಗೌರವ ಕಾರ್ಯದರ್ಶಿ ರಾಧೇಶ್ ಉಚ್ಚಿಲ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೈಹಿಂದ್ ಸ್ಫೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಪುರುಷೋತ್ತಮ ಕೆ. ಐಲ್, ವಿಕ್ರೋಳಿ ಕನ್ನಡ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸತೀಶ್ ಐಲ್, ಮೀರಾ ಶೆಟ್ಟಿ ಹಾಗೂ ಸಮಾಜದ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಫೌಂಡೇಶನ್ ಗೌರವ ಕೋಶಾಧಿಕಾರಿ ಯಶವಂತ್ ಎನ್ ಐಲ್, ಉಪಾಧ್ಯಕ್ಷರುಗಳಾದ ರವೀಂದ್ರ ಬತ್ತೇರಿ, ಶ್ರೀಮತಿ ಶ್ವೇತಾ ಉಚ್ಚಿಲ್ ಮತ್ತು ಕುಮಾರಯ್ಯ ಐಲ್, ಜೊತೆ ಕೋಶಾಧಿಕಾರಿಗಳಾದ ಶ್ರೀಮತಿ ಧನ್ಯಶ್ರೀ ಐಲ್ ಮತ್ತು ಶ್ರೀಮತಿ ರೂಪಾ ಉಚ್ಚಿಲ್ , ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಸುಷ್ಮಾ ಕುಂಬ್ಳೆ ಮತ್ತು ಶ್ರೀಮತಿ ಸ್ವಪ್ನ ಉಚ್ಚಿಲ್ ಸಲಹೆಗಾರರಾದ ಮೀರಾ ಶೆಟ್ಟಿ ಹಾಗೂ ನಮೊ ಮೋಯರ್ ಗ್ಲೋಬಲ್ ಫೌಂಡೇಶನ್ ಸಮಿತಿಯ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿದರು.

ಕಾರ್ಯಕ್ರಮವನ್ನು ಜಯಂತಿ ಸತೀಶ್ ಐಲ್, ಸ್ವೇತಾ ರೋಹಿತ್ ಉಚ್ಚಿಲ್, ಸ್ವಪ್ನ ಉಚ್ಚಿಲ್, ಸುರೇಖಾ ಪೂಜಾರಿ ನಿರ್ವಹಿಸಿದರು. ಮೆಲೋಡಿಯಸ್ ಹಾಗೂ ವಿ ಆರ್ ಮ್ಯೂಸಿಕ್ ತಂಡದ ಗಾಯಕರು ಸಂಗೀತದ ರಸದೌತಣವನ್ನು ನೀಡಿದ್ದು ಸಮಾಜದ ಪ್ರತಿಭಾವಂತರೂ ಇದರಲ್ಲಿ ಭಾಗವಹಿ್ಸಿ ಮನರಂಜಿಸಿದರು.

Comments are closed.