ಬೈಂದೂರು: ಶ್ರೀ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ನೂತನ ಅಧ್ಯಕ್ಷರಾಗಿ ಜಯಾನಂದ ಹೋಬಳಿದಾರ್ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಕೆ. ವೆಂಕಟೇಶ್ ಕಿಣಿ, ಕಾರ್ಯದರ್ಶಿ ಪ್ರಕಾಶ್ ಬೈಂದೂರು, ಉಪಾಧ್ಯಕ್ಷರಾಗಿ ಉದಯ್ ಪಡಿಯಾರ್, ಖಜಾಂಚಿ ವಿಜಯ್ ಪೂಜಾರಿ, ಸದಸ್ಯರಾಗಿ ಸಂಜಯ್ ಬೈಂದೂರು, ಶಂಕರ್ ಶೇರುಗಾರ್, ಸುಧಾಕರ್ ಎಚ್. ನಾಗರಾಜ ಶೇಟ್, ಶ್ರೀಕುಮಾರ್ ಬೈಂದೂರು, ಬಾಲಕೃಷ್ಣ ಬೈಂದೂರು ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಜಯಾನಂದ ಹೋಬಳಿದಾರ್ ಮಾತನಾಡಿ, ಬೈಂದೂರಿನ ಶ್ರೀ ಮೂಕಾಂಬಿಕಾ ರೋಡ್ ರೈಲು ನಿಲ್ದಾಣವು ಪ್ರಮುಖ ನಿಲ್ದಾಣವಾಗಿದ್ದು ಇದರ ಬೆಳವಣಿಗೆಯಲ್ಲಿ ಹಿಂದಿನಿಂದಲೂ ಹೋರಾಟವಿತ್ತು. ಇಲ್ಲಿ ಬರುವ ಪ್ರಯಾಣಿಕರಲ್ಲಿ ಕೊಲ್ಲೂರಿಗೆ ತೆರಳುವ ಭಕ್ತರು ಹೆಚ್ಚಾಗಿದ್ದು ಅವರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಯಾತ್ರಿ ಸಂಘ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಪ್ರಮುಖ ರೈಲುಗಳ ನಿಲುಗಡೆಯ ಜೊತೆಗೆ, ಕೊರೋನಾ ಕಾಲಘಟ್ಟದಲ್ಲಿ ನಿಲುಗಡೆ ಸ್ಥಗಿತವಾದ ರೈಲುಗಳ ಪುನರ್ ನಿಲುಗಡೆಗೆ ಸಂಘ ಅಗತ್ಯ ಕ್ರಮವಹಿಸುತ್ತದೆ. ಈ ರೈಲು ನಿಲ್ದಾಣ ದೊಡ್ದ ಮಟ್ಟದಲ್ಲಿ ಬೆಳೆಯಬೇಕು. ಮೂಲಸೌಕರ್ಯ ವೃದ್ಧಿ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿ ಯಾತ್ರಿ ಸಂಘ ಮುನ್ನೆಡೆಯಲಿದೆ ಎಂದರು.
Comments are closed.