ಮುಂಬಯಿ: ಮಾರ್ಚ್ ತಿಂಗಳ 6 ರಿಂದ 17ರ ತನಕ ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆಯಲಿರುವ ಅಂತರಾಷ್ಟೀಯ ಮಹಿಳಾ ದಿನಾಚರಣೆಯಂದು ಭಾರದ ದೇಶದ ಶಿಕ್ಷಣ ಪದ್ದತಿ ಬಗ್ಗೆ “ಕಮಿಶನ್ ಓನ್ ದಿ ಸ್ಟೇಟಸ್ ಅಫ್ ಉಮೆನ್” (ಮಹಿಳಾ ಅಂತಸ್ತು ಆಯೋಗ) (CSW67) ದ 67ನೇ ಅಧಿವೇಶನಕ್ಕೆ ಇಂಡಿಯನ್ ಡೆವಲಪ್ಮೆಂಟ್ ಫೌಂಡೇಶನ್ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಇಂಡಿಯನ್ ಡೆವಲಪ್ಮೆಂಟ್ ಫೌಂಡೇಶನ್, ಇವರನ್ನು ತನ್ನ ಪ್ರತಿನಿಧಿಯಾಗಿ ನೇಮಿಸಿದೆ. ಇವರು ನಮ್ಮ ದೇಶದ 20 ಜನ ಪ್ರತಿನಿಧಿಗಳಲ್ಲಿ ಮಂಗಳೂರು ಮೂಲಕ ಏಕೈಕ ಮಹಿಳೆ ಡಾ. ವಿಜೇತಾ ಎಸ್. ಶೆಟ್ಟಿ ಆಯ್ಕೆಯಾಗಿದ್ದಾರೆ.
ಸ್ಟೇಟಸ್ ಅಫ್ ಉಮೆನ್ ಆಯೋಗದ ಕೆಲಸದಲ್ಲಿ ಸರ್ಕಾರೇತರ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆ ನಿರ್ಣಾಯಕ ಅಂಶವಾಗಿದೆ. ಈ ಆಯೋಗದ 67 ನೇ ಅಧಿವೇಶನ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯೊಂದಿಗೆ (ECOSOC) ಸಮಾಲೋಚನಾ ಸ್ಥಿತಿಯಲ್ಲಿರುವ NGO ಗಳ ಪ್ರತಿನಿಧಿಯಾಗಿ ಇವರು ಅಧಿವೇಶನದಲ್ಲಿ ಭಾಗವಹಿಸಲಿರುವರು.
ಗೋರೆಗಾಂವ್ ಪಶ್ಚಿಮದ ವಿವೇಕ್ ಕಾಲೇಜಿನ ಪ್ರಾಂಶುಪಾಲರಗಿರುವ ಡಾ. ವಿಜೇತಾ ಎಸ್. ಶೆಟ್ಟಿ ಯವರ ಎಳೆಯ ಪ್ರಾಯದಲ್ಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಪದವಿಗಳನ್ನು ಪಡೆದು ಇವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಇಂಡಿಯನ್ ಡೆವಲಪ್ಮೆಂಟ್ ಫೌಂಡೇಶನ್ ಇವರಿಗೆ ಈ ಗೌರವ ನೀಡಿದೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ., ಎಂ.ಕಾಂ, ಪಿ. ಎಚ್.ಡಿ. ಅಲ್ಲದೆ ಇನ್ನೂ ಹಲವಾರು ಪದವಿಗಳನ್ನು ಗಳಿಸಿದ ಇವರು ಅನೇಕ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ. ಹಾಗೂ ಎಮ್.ಫಿ.ಎಲ್. ಮಾರ್ಗದರ್ಶನ ನೀಡಿದ್ದು ಅವರನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ವಿಯಾಗಿರಿಸಿದ್ದಾರೆ. 29 ವರ್ಷಗಳಿಂದಲೂ ಅಧಿಕ ಕಾಲ ಶಿಕ್ಷಕಿಯಾಗಿ ಅನುಭವವನ್ನು ಪಡೆದ ಇವರು 4 ಅಂತರಾಷ್ಟೀಯ ಮಟ್ಟಾದ ಮತ್ತು 2 ರಾಷ್ಟ್ರೀಯ ಮಟ್ಟದ ಗ್ರಂಥಗಳನ್ನು ರಚಿಸಿದ್ದಾರೆ. ಇವರು ಬರೆದ The Existence Of Brand Loyalty Among Women Consumers-An Empirical Study ಮತ್ತು ಇತರ ಕೆಲವು ಪುಸ್ತಕಗಳು ಅಮೆಜ಼ಾನ್ ನಲ್ಲಿ ಲಭ್ಯವಿದೆ.
ಅನೇಕ ಸಂಶೋಧನಾ ಯೋಜನೆ ಸಲ್ಲಿಸುದರೊಂದಿಗೆ ಹಲವಾರು ಸೆಮಿನಾರ್ ಗಳಲ್ಲಿ ಇವರು ಭಾಗವಹಿಸಿದ್ದು ಮಾತ್ರವಲ್ಲದೆ ಇವರು ಗಳಿಸಿದ ಪ್ರಶಸ್ತಿ ಪುರಸ್ಕಾರಗಳು ಹಲವಾರು, ಹೀಗೇ ಡಾ. ವಿಜೇತಾ ಎಸ್. ಶೆಟ್ಟಿ ಯವರು ಶಿಕ್ಷಣ ಕ್ಷೇತ್ರದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿದ್ದಾರೆ.
ಪೇಜಾವರ ಚಿಕ್ಕ ಪೆರಾರಿ ದಿ. ವಿಶ್ವನಾಥ ಶೆಟ್ಟಿ ಮತ್ತು ಮೂಳೂರು ಕಂಕಣಗುತ್ತು ಶಾರದಾ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಡಾ. ವಿಜೇತಾ ಎಸ್. ಶೆಟ್ಟಿ ಬಂಟರ ಸಂಘ ಮುಂಬಯಿಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಎ. ಸಂಜೀವ ಶೆಟ್ಟಿಯವರ ಧರ್ಮಪತ್ನಿ ಮತ್ತು ಮಗಳು ಸಿಎ ಮಿಖಿತಾ ಎಸ್ ಶೆಟ್ಟಿ.
Comments are closed.