ಕರಾವಳಿ

ಕಾಪುವಿನಲ್ಲಿ ಗೋ ಮಾಂಸ ವಶ, ಇಬ್ಬರು ಆರೋಪಿಗಳು ಪರಾರಿ..!

Pinterest LinkedIn Tumblr

ಉಡುಪಿ: ಗೋ ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಕಾಪುವಿನ ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿ ಜ.8 ರಂದು ನಡೆದಿದೆ.

ಕಾಪು ಭಾರತ್‌ ನಗರದ ನಿವಾಸಿ ಮೊಹಮ್ಮದ್‌ ಆರೀಫ್ ಹಾಗೂ ಇನ್ನೋರ್ವ ಆರೋಪಿ‌ ಪೊಲೀಸರಿಂದ ತಪ್ಪಿಸಿಕೊಂಡವರು. 9 ಚೀಲದಲ್ಲಿದ್ದ ಸುಮಾರು 200 ಕೆ.ಜಿಯಷ್ಟು ದನದ ಮಾಂಸ, ಕತ್ತಿ, ಚೂರಿ, ಮೊದಲಾದವುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.