ಕುಂದಾಪುರ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ 104ನೇ ಸಂಸ್ಥಾಪನಾ ದಿನಾಚರಣೆಯನ್ನು ಶುಕ್ರವಾರದಂದು ತಾಲೂಕಿನ ಹುಣ್ಸೆಮಕ್ಕಿ ಶಾಖೆಯ ಶಾಖೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಡಬ್ಲ್ಯೂಡಿ ಗುತ್ತಿಗೆದಾರ ಚಂದ್ರಶೇಖರ ಶೆಟ್ಟಿ ಮೊಳಹಳ್ಳಿ, ಕೃಷಿ ಇಲಾಖೆಯ ನಿವೃತ್ತ ನಿರ್ದೆಶಕ ಜಯಶೀಲ ಶೆಟ್ಟಿ, ಕೇಶೇಂದ್ರ ಹೆಗ್ಡೆ, ಶ್ರೀ ಓಂಕಾರ ಕ್ಯಾಶ್ಯೂಸ್ ಆಡಳಿತ ಪಾಲುದಾರ ಗಜೇಂದ್ರ ಶೆಟ್ಟಿ, ಶೀತಲ್ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕ ಅಶೋಕ್ ಕುಮಾರ್ ಶೆಟ್ಟಿ, ಹುಣ್ಸೆಮಕ್ಕಿ ಶಾಖೆ ವ್ಯವಸ್ಥಾಪಕ ಅರುಣ್ ಕುಮಾರ್ ಶಾಖಾ ಹಾಗೂ ಸಿಬ್ಬಂದಿಗಳು, ಗ್ರಾಹಕರಿದ್ದರು.
ಕೇಕ್ ಕತ್ತರಿಸಿ ಕಾರ್ಯಕ್ರಮ ಉದ್ಘಾಟಿಸಿದ್ದು ಬ್ಯಾಂಕ್ ವ್ಯವಹಾರಗಳ ಬಗ್ಗೆ ಗಣ್ಯರು ಪ್ರಶಂಸೆ ಹಾಗೂ ಮೆಚ್ಚುಗೆ ಮಾತುಗಳನ್ನಾಡಿದರು.
Comments are closed.