ಕರ್ನಾಟಕ

ಬೊಮ್ಮಾಯಿ ಅವರ ‘ದಲಿತರ ಮನೆಯ ಊಟ’ ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣ: ಕಾಂಗ್ರೆಸ್ ಟೀಕೆ

Pinterest LinkedIn Tumblr

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ‘ದಲಿತರ ಮನೆಯ ಊಟ’ ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ದಲಿತರ ಮನೆಯಲ್ಲಿ ಊಟದ ಹೆಸರಿನಲ್ಲಿ ಬ್ರಾಂಡೆಡ್ ನೀರು, ಟೀ ಪೌಡರ್ ತರಿಸುವ ಮೂಲಕ ಅವರಿಗೆ ಅವರಿಗೆ ಅವಮಾನಿಸಲಾಗಿದೆ. ಇದಕ್ಕಾಗಿಯೇ ಪೇ ಸಿಎಂ ದಲಿತರ ಮನೆಗೆ ಹೋದ್ರ ಎಂದು ಪ್ರಶ್ನಿಸಲಾಗಿದೆ.

 

ಬಿಜೆಪಿಗೆ ದಲಿತರ ಮನೆಯ ಊಟ ಅವಮಾನಕರವಾಗಿತ್ತು, ಈಗ ಅನುಮಾನಕರವಾಗಿದೆ. ಬಿಜೆಪಿಗೆ ದಲಿತರೆಂದರೆ ಅಷ್ಟೊಂದು ಅನುಮಾನವೇ? ಎಂದು ಕೇಳಿದೆ. ದಲಿತರ ಹಿತಬೇಡ, ಅವರ ಏಳಿಗೆ, ಸಮಾನತೆ, ಅಧಿಕಾರ, ದಲಿತರ ನಿಗಮಗಳಿಗೆ ಹಣ, ಶಿಕ್ಷಣ, ರಕ್ಷಣೆ, ವಿದ್ಯಾರ್ಥಿ ವೇತನ ಬೇಡ. ದಲಿತರ ಮತ ಮಾತ್ರ ಬೇಕೆ? ಎಂದು ಮತ್ತೊಂದು ಟ್ವೀಟ್ ನಲ್ಲಿ ಪ್ರಶ್ನೆ ಮಾಡಲಾಗಿದೆ.

Comments are closed.