ಕರಾವಳಿ

ಸುರತ್ಕಲ್ ಅಕ್ರಮ ಟೋಲ್ ತೆರವಿಗಾಗಿ ಟೋಲ್ ಗೇಟ್ ಮುತ್ತಿಗೆ; ಅ.18 ಕುಂದಾಪುರದಿಂದ ನೂರಾರು ಮಂದಿ ಭಾಗವಹಿಸಲು ನಿರ್ಧಾರ

Pinterest LinkedIn Tumblr

ಕುಂದಾಪುರ: ಹತ್ತು ಕಿ.ಮೀ ಅಂತರದಲ್ಲಿ ಎರಡು ಕಡೆ ಟೋಲ್ ಸಂಗ್ರಹಿಸುವುದು ಹೆದ್ದಾರಿ ದರೋಡೆಗೆ ಸಮ. ಈ ರೀತಿ ಪ್ರಯಾಣೆಕರನ್ನು ಬಲವಂತವಾಗಿ ವಸೂಲಿ ಮಾಡುವುದು ನಿಯಮಗಳ ಉಲ್ಲಂಘನೆಯಾಗಿದೆ.

ಆರು ತಿಂಗಳ ತಾತ್ಕಾಲಿಕ ಅವಧಿಗೆ ಆರಂಭಗೊಂಡ ಸುರತ್ಕಲ್ ಟೋಲ್ ಗೇಟ್ ಜನರ ಪ್ರಬಲ ವಿರೋಧದ ಹೊರತಾಗಿಯೂ ಏಳು ವರ್ಷಗಳನ್ನು ಅಕ್ರಮವಾಗಿ ಪೂರೈಸಿದೆ.ಈ ಅವಧಿಯಲ್ಲಿ ಸುರತ್ಕಲ್,ಬಿ.ಸಿ. ರೋಡ್ ಹೆದ್ದಾರಿಯಲ್ಲಿ ಸುಂಕ ಸಂಗ್ರಹದ ಹೆಸರನಲ್ಲಿ ವಾಹನ ಸವಾರರಿಂದ ವಸೂಲಿ ಮಾಡಿದ ಮೊತ್ತ ಸರಿ ಸುಮಾರು 400 ಕೋಟಿ ರೂಪಾಯಿ. ಇಷ್ಟಾದರೂ ಆಳುವವರ ಹಣದ ದಾಹ ತಣಿಯುತ್ತಿಲ್ಲ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದರು.ಕುಂದಾಪುರ ಕಾರ್ಮಿಕ ಭವನದ ಸಬಾಂಗಣದಲ್ಲಿ ಜರುಗಿದ ಟೋಲ್ ಗೇಟ್ ಮುತ್ತಿಗೆ ಹೋರಾಟದ ಯಶಸ್ಸಿಗಾಗಿ ಏಪ‌೯ಡಿಸಿದ ಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಹೋರಾಟ‌‌ ಸಮಿತಿಯ ಮುಖಂಡ ಸಹಕಾರಿ ‌ದುರೀಣ ಕೊಳ್ಕೆಬೈಲ್ ಕಿಶನ್ ಹೆಗ್ಡೆ ಮಾತನಾಡಿ, ಟೋಲ್ ಗೇಟ್ ಮುತ್ತಿಗೆ ಹೋರಾಟಕ್ಕೆ ಬಸ್ಸ್ ಮಾಲಕರ ಸಂಘವು ಸಂಪೂಣ೯ ಬೆಂಬಲ ಕೊಡುತ್ತದೆ‌.ಉಡುಪಿ ಜಿಲ್ಲೆಯ ಬಡ ಮದ್ಯಮ ವರ್ಗದ ಹಾಗೂ ಟ್ಯಾಕ್ಸಿ ಚಾಲಕರನ್ನು ಟೋಲ್ ಗೇಟ್ ಹಿಂದಿರುವ ಶಕ್ತಿಗಳು ನಿರಂತರ ಪೋಷಿಸುತ್ತಿದೆ ಈ ಶೋಷಣೆಯ ನಾಂದಿಗೆ ನೂರಾರು ಮಂದಿ ಜಿಲ್ಲೆಯಿಂದ ಭಾಗವಹಿಸುವಂತೆ ಕರೆ ನೀಡಿದರು.

ಟೋಲ್ ಗೇಟ್ ಮುತ್ತಿಗೆ ನೇರ ಕಾರ್ಯಾಚರಣೆಯ ಅಂಗವಾಗಿ ಕುಂದಾಪುರ ಪೇಟೆಯಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ಜಾಥಾ ನಡೆಸಲು ನಿರ್ಧರಿಸಲಾಯಿತು.

ಇಂಟಕ್ ಮುಖಂಡ ಲಕ್ಷ್ಮಣ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ಚಂದ್ರಶೇಖರ ವಿ., ರಮೇಶ್ ವಿ., ರಾಜು ದೇವಾಡಿಗ, ರವಿ, ದಲಿತ ಸಂಘರ್ಷ ಸಮಿತಿ ಮುಖಂಡ ನಾಗರಾಜ, ಶ್ರೀನಿವಾಸ ಮಲ್ಯಾಡಿ, ಶ್ರೀನಾಥ ಕುಲಾಲ್,ಗಣೇಶ ಮೆಂಡನ್, ಬಾಲಕೃಷ್ಣ ಎಂ., ವೆಂಕಟೇಶ್ ಕೋಣಿ ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Comments are closed.