ಕರಾವಳಿ

ಉಡುಪಿ: ಪೂಜೆ ಮುಗಿಸಿ ವಾಪಾಸ್ಸಾಗುತ್ತಿದ್ದ ಮಹಿಳೆ ಕುಸಿದುಬಿದ್ದು ಮೃತ್ಯು

Pinterest LinkedIn Tumblr

ಉಡುಪಿ: ಪೂಜೆ‌ ಮುಗಿಸಿ ವಾಪಾಸ್‌ ಆಗುವ ವೇಳೆ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಣಿಪುರ ದೆಂದೂರುಕಟ್ಟೆಯಲ್ಲಿ ನಡೆದಿದೆ. ಮಣಿಪುರ ದೆಂದೂರುಕಟ್ಟೆ, ಇಂದ್ರಾಳಿ ತೋಟದ ಗೌರಿ ಪೂಜಾರಿ (54) ಮೃತ ಮಹಿಳೆ.

ಕುಸಿದು ಬಿದ್ದ ಗೌರಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಮಣಿಪಾಲದ ಆಸ್ಪತ್ರೆಯೊಂದರಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದ ಗೌರಿ ಪೂಜಾರ್ತಿ ಕಳೆದ ಹಲವು ವರ್ಷಗಳಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದರು. ಸೋಮವಾರ ಸಂಜೆ ಸುಮಾರು 3:45 ಗಂಟೆಗೆ ಸಂಬಂಧಿಕರ ಮನೆಯಲ್ಲಿನ ಪೂಜಾ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಮರಳಿ ಬರುವಾಗ ಕುಸಿದು ಬಿದ್ದಿದ್ದಾರೆ. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.