ಕರ್ನಾಟಕ

ದೀರ್ಘಾಯುಷಿ ಖ್ಯಾತಿಯ ತ್ಯಾವರೆಕೊಪ್ಪ‌ ಸಫಾರಿಯ ಹುಲಿ ‘ಹನುಮ’ ಇನ್ನಿಲ್ಲ

Pinterest LinkedIn Tumblr

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ರಾಜ್ಯದಲ್ಲೆ ದೀರ್ಘಾಯುಷಿ ಎಂದು ಕರೆಸಿಕೊಂಡಿದ್ದ ಹನುಮ ಹುಲಿ ಅನಾರೋಗ್ಯದಿಂದ ಮೃತಪಟ್ಟಿದೆ.

ಸಿಂಹಧಾಮದಲ್ಲಿ 18 ವರ್ಷಗಳ ಕಾಲ ಬದುಕಿದ್ದ ವಾಲಿ ಹಾಗೂ ರಾಮ ಹುಲಿಗಳು ಇತ್ತೀಚೆಗಷ್ಟೇ ಸಾವನ್ನಪ್ಪಿದ್ದವು. 20 ವರ್ಷ ಬದುಕಿದ್ದ ಹನುಮ ಹುಲಿ ವಿಶೇಷ ಆಕರ್ಷಣೆ ಮೂಲಕ ಪ್ರವಾಸಿಗಳನ್ನು ಬಹುಬೇಗ ಸೆಳೆಯುತ್ತಿದ್ದ.

20 ವರ್ಷ ಕಳೆದ ಹನುಮ ಹುಲಿ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು ಇಲ್ಲಿನ ಅರಣ್ಯಾಧಿಕಾರಿಗಳ ಮುತುವರ್ಜಿಯಿಂದ ಆತನು ಈವರೆಗೆ ಬದುಕಿದ್ದ. ಹಿರಿಯ ಹುಲಿಯನ್ನು ಉಳಿಸಿಕೊಳ್ಳಲು ಸಿಂಹಧಾಮದ ಸಿಬ್ಬಂದಿಯೂ ಸಾಕಷ್ಟು ಶ್ರಮ ವಹಿಸಿದ್ದರು. ಹನುಮ ಮಲಗುವುದಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಅತಿಹೆಚ್ಚು ದಿನ ಬದುಕಿದ ಗಂಡು ಹುಲಿ ಎಂಬ ದಾಖಲೆಯನ್ನು ಹನುಮ ಬರೆದಿದ್ದಾನೆ. ವಾಲಿ ಹಾಗೂ ರಾಮ ಹನುಮನ ಸೋದರರು. ಈ ಎರಡು ಹುಲಿಗಳು 18 ವರ್ಷಗಳ ಕಾಲ ಬದುಕಿದ್ದವು.

ಹಿರಿಯ ಹನುಮ ಹುಲಿ ನಿಧನದ ನಂತರ ಸದ್ಯ ಸಿಂಹಧಾಮದಲ್ಲಿ ಹುಲಿಗಳ ಸಂಖ್ಯೆ 4ಕ್ಕೆ ಇಳಿದಿದೆ. ಎರಡು ವರ್ಷದ ಹಿಂದೆ ಸಿಂಹಧಾಮದಲ್ಲಿ ಗಂಡುಹುಲಿಗಳೇ ಹೆಚ್ಚಿದ್ದವು.

Comments are closed.