ಕರಾವಳಿ

ತೆಕ್ಕಟ್ಟೆ ಸಮೀಪದ ಮಾಲಾಡಿ ಬಳಿ ಮತ್ತೆ ಚಿರತೆ ಕಾಟ: ಸಾಕು ನಾಯಿಯನ್ನು ಎಳೆದೊಯ್ದ ಚೀತಾ..!

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಚಿರತೆ ಓಡಾಟ ಹೆಚ್ಚಿದೆ. ಈಗಾಗಾಲೇ ಈ ಪ್ರದೇಶದಲ್ಲಿ 5 ಚಿರತೆ ಸೆರೆ ಹಿಡಿಯಲಾಗಿತ್ತು.

(File Photo)

ಬುಧವಾರ ರಾತ್ರಿ ಮತ್ತೆ ಮನೆಯಂಗಳದಲ್ಲಿ ಪ್ರತ್ಯಕ್ಷವಾದ ಚಿರತೆ ಇಲ್ಲಿನ ನಿವಾಸಿ ಸುರೇಶ್ ದೇವಾಡಿಗ ಎನ್ನುವರ ಮನೆ ಸಾಕು ನಾಯಿಯನ್ನು ಎಳೆದೊಯ್ದಿದೆ.

ಮಾಲಾಡಿಯ ತೋಪಿನ ಸಮೀಪದಲ್ಲಿ‌ದ್ದ ಮನೆಯಂಗಳಕ್ಕೆ 7.30ರ ಹೊತ್ತಿಗೆ ಬಂದ ಚಿರತೆ ಅಂಗಳದಲ್ಲಿದ್ದ ಸಾಕು ನಾಯಿಯನ್ನು ಎಳೆದೊಯ್ದಿದೆ. ಸುರೇಶ್ ದೇವಾಡಿಗ ಹಾಗೂ ಸತೀಶ್ ದೇವಾಡಿಗ ಕುಟುಂಬಿಕರು ಮನೆಯಲ್ಲಿದ್ದ ವೇಳೆ ಘಟನೆ ನಡೆದಿದೆ.

ಚಿರತೆ ಸಂಚಾರವಿರುವ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ, ದೇವಸ್ಥಾನ ವಸತಿ ಪ್ರದೇಶವಿದ್ದು ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದೆ. ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಭಯಭೀತರಾಗಿದ್ದಾರೆ.

Comments are closed.