ಮಂಗಳೂರು: ಸ್ಥಳ ಮಹಜರಿಗೆ ಹೋದ ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಆರೋಪಿ ಕಾಲಿಗೆ ಮಂಗಳೂರು ಪೊಲೀಸರು ಫೈರಿಂಗ್ ಮಾಡಿದ ಘಟನೆ ನಡೆದಿದೆ.

ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಂಬಳ ಗ್ರಾಮದ ಬಳಿ ಕೊಲೆ ಯತ್ನದ ಆರೋಪಿ ಎಂ.ಡಿ. ಮುಷ್ತಾಕ್ನನ್ನು ಸ್ಥಳ ಮಹಜರ್ಗೆ ಕರೆದೊಯ್ಯಲಾಗಿತ್ತು. ಈ ವೇಳೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮುಸ್ತಾಕ್ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದ. ಆಗಸ್ಟ್19 ರಂದು ಕೊಲೆ ಯತ್ನ ಪ್ರಕರಣದಲ್ಲಿ ಮುಷ್ತಾಕ್ನನ್ನು ಬಂಧಿಸಲಾಗಿತ್ತು.
ನಿಮ್ಮೆ ಸ್ಥಳ ಮಜಹರು ಮಾಡಲು ಕರೆದೊಯ್ದಾಗ ಆರೋಪಿಯು ಪೊಲೀಸರ ಮೇಲೆರೆಗಿ ತಪ್ಪಿಸಲು ಮುಂದಾದ ಎನ್ನಲಾಗಿದೆ.
Comments are closed.