ಕರಾವಳಿ

ಕಾಸರಗೋಡಿನಲ್ಲಿ ರೈಲಿಗೆ ಕಿಡಿಗೇಡಿಗಳಿಂದ ಕಲ್ಲೆಸೆತ; ಇಬ್ಬರಿಗೆ ಗಾಯ

Pinterest LinkedIn Tumblr

ಕಾಸರಗೋಡು: ಕಾಸರಗೋಡಿನ ಎರಿಯಾಲ್‌ ಮತ್ತು ಚೇರಂಗೈಯಲ್ಲಿ ಶುಕ್ರವಾರ ಸಂಜೆ ಕಿಡಿಗೇಡಿಗಳು ಮಂಗಳೂರು -ಕಣ್ಣೂರು ಮತ್ತು ಮಂಗಳೂರು – ತಿರುವನಂಪುರ ರೈಲುಗಳಿಗೆ ಕಲ್ಲು ತೂರಾಟ ನಡೆಸಿದ್ದು ಇದರಿಂದಾಗಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.

(ಸಾಂದರ್ಭಿಕ ಚಿತ್ರ)

ಐವರು ಕಲ್ಲು ಎಸೆದು ಓಡಿರುವುದನ್ನು ನೋಡಿರು ವುದಾಗಿ ಪ್ರಯಾಣಿಕರು ರೈಲ್ವೇ ಪೊಲೀಸರಲ್ಲಿ ತಿಳಿಸಿದ್ದಾರೆ. ಹಿಂದಿನಿಂದಲೂ ರೈಲಿಗೆ ಕಲ್ಲೆಸೆಯುತ್ತಿದ್ದು ಕಾಸರಗೋಡು ಜಿಲ್ಲೆಯ ಬಂದ್ಯೋಡು ಮುಟ್ಟಂ, ಬೇಕಲ ಬಳಿಯ ಕೋಟಿ ಕುಳಂ, ಕಣ್ಣೂರು ಜಿಲ್ಲೆಯ ಪಾಪ್ಪಿನಶೇರಿ ಮುಂತಾದ 7 ಕಡೆಗಳಲ್ಲಿ ಕೆಲವು ದಿನಗಳ ಹಿಂದೆ ರೈಲು ಹಳಿಯಲ್ಲಿ ಕಗ್ಗಲ್ಲಿನ ತುಂಡುಗಳನ್ನಿರಿಸಿ ಬುಡಮೇಲುಗೊಳಿಸುವ ಕೃತ್ಯ ನಡೆದಿದೆ.

ಆದರೆ ಇಲಾಖೆಯ ಉದ್ಯೋಗಿಳು ಮಾಹಿತಿ ತಿಳಿದು ಕಲ್ಲನ್ನು ತೆರವುಗೊಳಿಸಿ ಸಂಭವ್ಯ ಭಾರೀ ದುರಂತವನ್ನು ತಪ್ಪಿಸಿದ್ದರು.

Comments are closed.