ಕುಂದಾಪುರ: ಕೋಟೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯ ಹಳೆಅಳಿವೆ ಸಮೀಪದ ಕಿನಾರ ಬೀಚ್ ರೆಸ್ಟೋರೆಂಟ್ ಹಾಗೂ ಗೋಪಾಡಿ ಮನೆ ಪರಿಸರದಲ್ಲಿ ತೀವ್ರ ಕಡಲ್ಕೊರೆತ ಕಾಣಿಸಿಕೊಂಡಿದ್ದು, ರೆಸ್ಟೋರೆಂಟ್ ನ ಗುಡಿಸಲುಗಳು ಧರೆಗುರುಳಿದೆ. ಈ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾದ ಕೋಡಿ-ಕೋಟೇಶ್ವರ ರಸ್ತೆ ಅಪಾಯದಂಚಿನಲ್ಲಿದೆ.



ಕಡಲ್ಕೊರೆತ ಪರಿಣಾಮದಿಂದ ಹಳೆಅಳಿವೆ ಕಡಲತೀರದಲ್ಲಿ ತಡೆಗೋಡೆಗಳಿಗೆ ಹಾಕಲಾದ ಕಲ್ಲುಗಳು ಸಮುದ್ರ ಪಾಲಾಗಿವೆ. ಗಾಳಿ ಮಳೆಯಿಂದ ಸಮೀಪದಲ್ಲಿರುವ ಗೂಡಂಗಡಿಗಳಿಗೆ ಕಡಲಿನ ಅಲೆಗಳ ನೀರು ಹೊಡೆಯುತ್ತಿದ್ದು, ತಮ್ಮ ವ್ಯಾಪಾರ ವಹಿವಾಟಿಗೆ ಧಕ್ಕೆಯುಂಟಾಗಿದೆ ಎನ್ನುತ್ತಿದ್ದಾರೆ ಸ್ಥಳೀಯ ಅಂಗಡಿ ಮಾಲೀಕರು.
ಹಲವು ವರ್ಷಗಳಿಂದ ಸತತ ಮಳೆಗಾಲದಲ್ಲಿ ಇದೇ ರೀತಿಯ ಸಮಸ್ಯೆ ಕಂಡುಬರುತ್ತಿದೆ. ಈಗಾಗಲೇ ಈ ಕುರಿತು ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಕಿನಾರ ರೆಸ್ಟೋರೆಂಟ್ ಬಳಿ ಪ್ರತಿ ಬಾರಿ ಮಳೆಗಾಲದಲ್ಲಿ ಕಡಲ್ಗೊರೆತ ಕಾಣಿಸಿಕೊಳ್ಳುವುದರಿಂದ ಸಮಸ್ಯೆಗಳು ಕಾಯಂ ಆಗಿದೆ.
ಕಡಲತೀರ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಸರಕಾರ ಕ್ರಮ ವಹಿಸಬೇಕು ಎಂಬುದು ಸ್ಥಳೀಯರ ಒಕ್ಕೊರಲ ಆಗ್ರಹವಾಗಿದೆ.
Comments are closed.