ಕರಾವಳಿ

ಮರವಂತೆ ಸಮುದ್ರ ತೀರಕ್ಕೆ ಭೇಟಿ‌ ನೀಡಿದ ಸಿಎಂ; ಕಡಲ್ಕೊರೆತ ಪ್ರದೇಶದ ಅವಲೋಕನ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರವಂತೆಯಲ್ಲಿ ಕಡಲ್ಕೊರೆತ ಹೆಚ್ಚಿದ್ದು ತೀವ್ರ ಕಡಲ್ಕೊರೆತದಿಂದ ಮರವಂತೆ ಜನರು ಕಂಗೆಟ್ಟಿದ್ದಾರೆ. ಬುಧವಾರ ಮರವಂತೆ ಕಡಲುತೀರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸ್ಥಳೀಯರ ಸಂಕಷ್ಟ ಆಲಿಸಿದರು.

ಈ ಪರಿಸರ ಬಿಟ್ಟು ಹೋಗಲು ಸಾಧ್ಯವಿಲ್ಲ. ಮೀನುಗಾರಿಕೆಯನ್ನೇ ನಂಬಿ ಬದುಕುವ ಜನ ನಾವು. ಶಾಶ್ವತ ಕಾಮಗಾರಿ ನಡೆಸಿ ನಮಗೆ ಬದುಕಲು ಬಿಡಿ… ಎಂದು ಜನರು ಅಳಲು ತೋಡಿಕೊಂಡರು.

ಇದೇ ವೇಳೆ ಶಾಶ್ವತ ಕಾಮಗಾರಿಗೆ ಸ್ಥಳೀಯರ ಆಗ್ರಹಿಸಿದ್ದು ತಾತ್ಕಾಲಿಕ ಕಾಮಗಾರಿಗೆ ತಕ್ಷಣ ಕ್ರಮಕೈಗೊಳ್ಳಲಾಗುವುದು ಮತ್ತು ಶಾಶ್ವತ ಕಾಮಗಾರಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿಗೆ ಸ್ಥಳೀಯ ಶಾಸಕ ಬಿಎಂ ಸುಕುಮಾರ್ ಶೆಟ್ಟಿ, ಸಚಿವರಾದ ಆರ್. ಅಶೋಕ್ ಕೋಟ ಶ್ರೀನಿವಾಸ ಪೂಜಾರಿ, ಅಂಗಾರ ಸಾಥ್‌ ನೀಡಿದರು.

Comments are closed.