ಕರಾವಳಿ

19 ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದ 3.25 ಲಕ್ಷ ಮೌಲ್ಯದ ಗಾಂಜಾ, ಚರಸ್ ನಾಶಪಡಿಸಿದ ಉಡುಪಿ ಜಿಲ್ಲಾ ಪೊಲೀಸರು

Pinterest LinkedIn Tumblr

ಉಡುಪಿ: ಜಿಲ್ಲೆಯ ಒಟ್ಟು 19 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ ಗಾಂಜಾ, ಚರಸ್ ಮೊದಲಾದ ಮಾದಕ ವಸ್ತುಗಳನ್ನು ಜೂ.26 ಭಾನುವಾರ ಪಡುಬಿದ್ರೆ ಠಾಣಾ ವ್ಯಾಪ್ತಿಯ ನಂದಿಕೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ ನಾಶಗೊಳಿಸಲಾಯಿತು.

ಉಡುಪಿ ಜಿಲ್ಲೆಯ ವಿವಿಧ 19 ಪೊಲೀಸ್ ಠಾಣೆಗಳ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಅಂದಾಜು 2,72,135 ಮೌಲ್ಯದ 9 ಕೆಜಿ 686 ಗ್ರಾಂ ಗಾಂಜಾ ಹಾಗೂ ಅಂದಾಜು 55 ಸಾವಿರ ಮೌಲ್ಯದ 410 ಗ್ರಾಂ ಚರಸ್ ಒಟ್ಟಾರೆ ಅಂದಾಜು 3,27,135 ಮೌಲ್ಯದ ಮಾದಕ ವಸ್ತುಗಳನ್ನು ಜಿಲ್ಲಾ ಡ್ರಗ್ ವಿಲೇವಾರಿ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಸಮಿತಿಯ ಸದಸ್ಯರಾದ ಉಡುಪಿ ಡಿವೈಎಸ್ಪಿ ಸುಧಾಕರ್ ಸದಾನಂದ ನಾಯ್ಕ, ಕಾರ್ಕಳ ಡಿವೈಎಸ್ಪಿ ಎನ್. ವಿಜಯ ಪ್ರಸಾದ್ ಸಮ್ಮುಖದಲ್ಲಿ ನಾಶಗೊಳಿಸಲಾಯಿತು.

ವಿಲೇವಾರಿಗೊಳಿಸಲಾದ ಪ್ರಕರಣಗಳಲ್ಲಿ ಮಣಿಪಾಲ ಹಾಗೂ ಸೆನ್ ಅಪರಾಧ ಠಾಣೆಯ ತಲಾ 4 ಪ್ರಕರಣ, ಕುಂದಾಪುರ ಹಾಗೂ ಕಾಪು ಠಾಣೆಯ ತಲಾ 3 ಪ್ರಕರಣಗಳು, ಕೋಟ ಹಾಗೂ ಗಂಗೊಳ್ಳಿ ಠಾಣೆಯ ತಲಾ 2 ಪ್ರಕರಣ, ಹಾಗೂ ಮಲ್ಪೆ ಠಾಣೆಯಿಂದ 1 ಪ್ರಕರಣ ಒಟ್ಟು 19 ಪ್ರಕರಣಗಳನ್ನು ಒಳಗೊಂಡಿದೆ. ಇವುಗಳಲ್ಲಿ ಅತ್ಯಂತ ಹಳೆಯ ಪ್ರಕರ ಮಣಿಪಾಲ ಠಾಣೆಯಲ್ಲಿ 2012ರಲ್ಲಿ ವರದಿಯಾದ 1 ಪ್ರಕರಣ, ಜಿಲ್ಲೆಯ ಇತರ ಠಾಣೆಗಳಲ್ಲಿ ವರದಿಯಾದ 2013ರ 4 ಪ್ರಕರ 2014, 2016, 2018ರಲ್ಲಿ ತಲಾ 1 ಪ್ರಕರಣ, 2019ರ 3 ಪ್ರಕರಣ, 2020ರ 1 ಪ್ರಕರಣ, 2021ರ 6 ಪ್ರಕರಣ ಹಾಗೂ 2022ರ ಪ್ರಕರಣ ಒಳಗೊಂಡಿರುತ್ತದೆ. ಇವುಗಳ ಪೈಕಿ 4 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 4 ಖುಲಾಸೆಗೊಂಡಿದೆ. 1 ಪ್ರಕರಣದ ಆರೋಪಿ ಮೃತನಾಗಿದ್ದು, 8 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಉಳಿದ 2 ಪ್ರಕರಣಗಳು ತನಿಖೆಯಲ್ಲಿದೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧಿಕಾರಿಗಳ ಕಾರ್ಯಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಪೊಲೀಸ್ ವರಿಷ್ಟಾಧಿಕಾರಿಯವರು ಇನ್ನು ಮುಂದಕ್ಕೂ ಕೂಡಾ ಇಂತಹ ಪ್ರಕರಣಗಳನ್ನು ಹೆಚ್ಚು, ಹೆಚ್ಚು ಪತ್ತೆ ಹಚ್ಚಿ, ಉಡುಪಿ ಜಿಲ್ಲೆಯ ಮಾದಕ ವ್ಯಸನಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಶ್ರಮಿಸಬೇಕೆಂದು ಕರೆ ನೀಡಿದರು.

ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್. (ಡಿಸಿಬಿ) ಪೊಲೀಸ್ ಠಾಣೆ ನಿರೀಕ್ಷಕ ಮಂಜುನಾಥ್ ಪೊಲೀಸ್, ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಮಣಿಪಾಲ ಠಾಣೆ ಪಿ.ಎಸ್.ಐ ಸುಧಾಕರ ತೋನ್ಸೆ, ಕೋಟ ಠಾಣೆ ಪಿಎಸ್ಐ ಮಧು ಬಿ.ಇ., ಕಾಪು ಠಾಣೆಯ ಭರತೇಶ್, ಗಂಗೊಳ್ಳಿ ಠಾಣೆಯ ವಿನಯ್ ಕೊರ್ಲಹಳ್ಳಿ, ಮಲ್ಪೆ ಠಾಣೆಯ ಸಕ್ತಿವೇಲು, ಪಡುಬಿದ್ರಿ ಠಾಣೆಯ ಪುರುಷೋತ್ತಮ, ಪಡುಬಿದ್ರಿ ಠಾಣೆ, ನಂದಿಕೂರು ಆಯುಷ್ ಸಂಸ್ಥೆಯ ಮಹೇಶ್ ಹಾಗೂ ಸತೀಶ್ ಹಾಗೂ ಎಎಸ್ಐ ಪ್ರಕಾಶ್ ಡಿ.ಸಿ.ಆರ್.ಬಿ., ಉಡುಪಿ ಹಾಗೂ ವಿವಿಧ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.