ಕರಾವಳಿ

ಸಣ್ಣ ನೀರಾವರಿ ಇಲಾಖೆ ಎ.ಇ ಮನೆಯಲ್ಲಿ 2 ಕೇಜಿಗೂ ಅಧಿಕ ಬಂಗಾರ,5 ಲಕ್ಷ ನಗದು,ಆಸ್ತಿ ದಾಖಲೆ ವಶಪಡಿಸಿಕೊಂಡ ಎಸಿಬಿ..!

Pinterest LinkedIn Tumblr

ಉಡುಪಿ: ಎಸಿಬಿ ಇವತ್ತು ಭರ್ಜರಿ ಭೇಟೆ ನಡೆಸಿದೆ. ಭ್ರಷ್ಟಾಚಾರ ನಿಗ್ರಹ ದಳದ15 ಅಧಿಕಾರಿಗಳ ತಂಡ ಉಡುಪಿಯಲ್ಲಿ ಇಂದು ಮುಂಜಾನೆ ಭ್ರಷ್ಟ ಅಧಿಕಾರಿಯನ್ನು ಬಲೆಗೆ ಬೀಳಿಸಿಕೊಂಡಿದೆ. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ನಗದು ಮತ್ತು ಆಸ್ತಿ ಹೊಂದಿದ್ದು ಪತ್ತೆಯಾಗಿದೆ.

ಸಣ್ಣ ನೀರಾವರಿ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಹರೀಶ್ ಬಲೆಗೆ ಬಿದ್ದ ಅಧಿಕಾರಿ. ಇವರ ಉಡುಪಿಯ ಕೊರಂಗ್ರಪಾಡಿ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು.ಇ. ಇವರ ವಿಲಾಸೀ ಬಂಗಲೆಯೊಳಗೆ ತಪಾಸಣೆ ನಡೆಸಿದಾಗ ಎರಡು ಕೆಜಿಗೂ ಅಧಿಕ ಚಿನ್ನಾಭರಣಗಳು ಪತ್ತೆಯಾಗಿವೆ. ಹರೀಶ್ ಮನೆಯಲ್ಲಿ ಸುಮಾರು 5 ಲಕ್ಷದಷ್ಡು ನಗದು ಸಿಕ್ಕಿದೆ. ದುಬಾರಿ ಬೆಲೆಯ ವಾಚುಗಳು, ಮೂರು ವಾಹನಗಳು,ಚಿನ್ನಾಭರಣಗಳ ಜೊತೆಗೆ ಚಿನ್ನದ ತಟ್ಟೆ ಚಿನ್ನದ ತಗಡು ಪತ್ತೆಯಾಗಿವೆ. ಚಿನ್ನಾಭರಣಗಳಲ್ಲಿ 15ಕ್ಕೂ ಹೆಚ್ಚು ಚಿನ್ನದ ಬಳೆ, 30ಕ್ಕೂ ಹೆಚ್ಚು ಸರ, ನೆಕ್ಲೆಸ್, ಬ್ರಾಸ್ಲೆಟ್ , ಉಂಗುರ, ದೇವರ ಮೂರ್ತಿ ಸೇರಿವೆ. ಇನ್ನು ಮನೆಯಲ್ಲಿದ್ದ ಅಪಾರ ಮೌಲ್ಯದ ಆಸ್ತಿ ಪತ್ರ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸದ್ಯ ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ಸೇರಿದಂತೆ 15 ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

Comments are closed.