ಕರಾವಳಿ

ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿಕ್ಕಿ-ಪಾದಚಾರಿ ದಾರುಣ ಸಾವು

Pinterest LinkedIn Tumblr

ಕುಂದಾಪುರ: ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿಯಾದ ಪರಿಣಾಮ ಪಾದಾಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಸ್ಥಳೀಯ ನಾಗೂರಿನ ನಿವಾಸಿ ಸದಾಶಿವ ಶ್ಯಾನುಭೋಗ್(45) ಮೃತ ದುರ್ದೈವಿ.

ಗುರುವಾರ ಸಂಜೆ ಸುಮಾರು 5.45ಕ್ಕೆ ಘಟನೆ ನಡೆದಿದೆ. ವ್ಯಾಕ್ಸ್ ವೋಗನ್ ಪೋಲೋ ಕಾರಿನಲ್ಲಿ ಕುಟುಂಬವೊಂದು ಭಟ್ಕಳದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು. ನಾಗೂರಿನಲ್ಲಿ ಇದೇ ಸಂದರ್ಭ ಸದಾಶಿವ ಶ್ಯಾನುಭೋಗ ಹೆದ್ದಾರಿ ದಾಟಲು ಯತ್ನಿಸಿದ್ದು ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸದಾಶಿವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

 

 

 

Comments are closed.