ಕರಾವಳಿ

ಸರ್ಕಾರಿ ವೈದ್ಯರ ನಕಲಿ ಸಹಿ, ಸೀಲ್ ಬಳಸಿ ವಂಚನೆಗೆ ಯತ್ನ; ವಿಟ್ಲದ ಯುವಕನ‌ ಬಂಧನ

Pinterest LinkedIn Tumblr

ಬಂಟ್ವಾಳ: ಸರಕಾರಿ ವೈದ್ಯರ ನಕಲಿ ಸಹಿ ಹಾಗೂ ಸೀಲ್ ಬಳಸಿ ಸರಕಾರಕ್ಕೆ ವಂಚಿಸಲು ಪ್ರಯತ್ನಿಸಿ ಆರೋಪಿಯೋರ್ವ ಸಿಕ್ಕಿ ಬಿದ್ದ ಜೈಲು ಸೇರಿದ ಪ್ರಕರಣವೊಂದು ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಯಲ್ಲಿ ನಡೆದಿದೆ.

ವಿಟ್ಲ ಶಾಲಾ ರಸ್ತೆ ನಿವಾಸಿ ಶೇಖ್ ಫಿರೋಜ್ ಆದಂ(26)ಬಂಧಿತ ಆರೋಪಿ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ವೇದಾವತಿ ಅವರ ದೂರಿನ ಮೇಲೆ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣವೇನು?
ಆರೋಪಿ ಫಿರೋಜ್ ಆದಂ ವಿಟ್ಲ ಪೋಲಿಸ್ ಠಾಣೆಯ ಮುಂಭಾಗದಲ್ಲಿ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ಮಾಲಕ ಅಬ್ದುಲ್ ಖಾದರ್ ಅವರ ಮಗ. ಆತ ಗ್ರಾಹಕನೋರ್ವನ ಪಿಟ್ ನೆಸ್ ಗಾಗಿ ವೈದ್ಯರ ನಕಲಿ ಸಹಿ ಬಳಸಿದ್ದಾನೆ ಎಂಬ ಆರೋಪದಲ್ಲಿ ಪೋಲೀಸರು ಬಂಧಿಸಿ‌ ಜೈಲಿಗೆ ಕಳುಹಿಸಿದ್ದಾರೆ. ಇಸುಬು ಎಂಬ ವ್ಯಕ್ತಿ ಲೈಸನ್ಸ್ ಮರುನವೀಕರಣ ಮಾಡಲು ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ಗೆ ಅರ್ಜಿ ಸಲ್ಲಿಸಿದರು.

ಆದರೆ ಲೈಸೆನ್ಸ್ ಮರುನವೀಕರಣಕ್ಕೆ ವೈದ್ಯರ ಪಿಟ್ ನೆಸ್ ಸರ್ಟಿಫಿಕೇಟ್ ಪಡೆಯಬೇಕು ಎಂಬುದು‌ ಇಲಾಖೆಯ ನಿಯಮವಾಗಿದ್ದರಿಂದ ಡ್ರೈವಿಂಗ್ ಸ್ಕೂಲ್ ನ ಮಾಲಕನ ಮಗ ವೈದ್ಯರ ಸಹಿ ಹಾಗೂ‌ ಸೀಲ್ ನಕಲಿ ಮಾಡಿ ಲೈಸೆನ್ಸ್ ನವೀಕರಣ ಮಾಡಲು ಮೆಲ್ಕಾರ್ ಆರ.ಟಿ.ಒ.ಕಚೇರಿಗೆ ಕಳುಹಿಸಿಕೊಟ್ಟಿದ್ದರು.

ಅಲ್ಲಿ ವಿಟ್ಲ ಸರಕಾರಿ ವೈದ್ಯ ರ ಒರಿಜಿನಲ್ ‌ಸಹಿ ಹಾಗೂ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ಸ್ ನವರು‌ ಕಳುಹಿಸಿದ ಪಿಟ್ ನೆಸ್ ಅರ್ಜಿ ಯಲ್ಲಿರುವ ವೈದ್ಯರ ಸಹಿ ತಾಳೆ ಮಾಡಿದಾಗ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಆರ್.ಟಿ.ಒ.ಇನ್ಸ್ ಪೆಕ್ಟರ್ ಅವರು ವಿಟ್ಲ ವೈದ್ಯರಿಗೆ ಪರಿಶೀಲನೆಗಾಗಿ ಕಳುಹಿಸಿಕೊಡುತ್ತಾರೆ.ಆರೋಗ್ಯ ಅಧಿಕಾರಿ ಅದನ್ನು ‌ಪರಿಶೀಲಿಸಿದಾಗ ನಕಲಿ ಸಹಿ ಹಾಕಿದ ಬಗ್ಗೆ ಗಮನಕ್ಕೆ ಬಂದು ಇದರ ತನಿಖೆಗಾಗಿ ವಿಟ್ಲ ಪೋಲಿಸರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದಲ್ಲಿ ವಿಟ್ಲ ಪೋಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಾಗರಾಜ್ ಎಚ್ ಅವರು ಆರಂಭದಲ್ಲಿ ಲೈಸೆನ್ಸ್ ನವೀಕರಣ ಮಾಡಲು ಅರ್ಜಿ ನೀಡಿದ ಇಸುಬು ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ನಲ್ಲಿ ಅರ್ಜಿ ನೀಡಿದ ಬಗ್ಗೆ ಮಾಹಿತಿ ನೀಡುತ್ತಾನೆ.ಈತನ ಮಾಹಿತಿ ಮೇಲೆ ಫಿರೋಜ್ ಆದಂ ನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Comments are closed.