ಕರಾವಳಿ

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಮಾಜಸೇವಕ ತೆಕ್ಕಟ್ಟೆ ಸುರೇಂದ್ರ ದೇವಾಡಿಗ ಮೃತ್ಯು

Pinterest LinkedIn Tumblr

ಕುಂದಾಪುರ: ಅಪಘಾತದಲ್ಲಿ ತೀವೃವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ತಾಲೂಕಿನ ತೆಕ್ಕಟ್ಟೆ ಕಂಚುಗಾರು ಬೆಟ್ಟು ನಿವಾಸಿ ಪ್ರಥಮ ದರ್ಜೆ ಗುತ್ತಿಗೆದಾರ, ಸಮಾಜ ಸೇವಕ ಸುರೇಂದ್ರ ದೇವಾಡಿಗ(42) ಬುಧವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ತೆಕ್ಕಟ್ಟೆ ಭಾಗದಲ್ಲಿ ಇತ್ತೀಚೆಗೆ ಸಂಭವಿಸಿದ ದ್ವಿಚಕ್ರ ವಾಹನದ ಅಪಘಾತದಲ್ಲಿ ತ್ರೀವ ಸ್ವರೂಪದ ಗಂಭೀರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವಾರದ ಹಿಂದಷ್ಟೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬಂದ ದಿನವೇ ಆಯಾಸಗೊಂಡು ಪುನಃ ಚಿಕಿತ್ಸೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನ ಹೊಂದಿದ್ದಾರೆ.

ಮೃತ ಸುರೇಂದ್ರ ಅವರು ತೆಕ್ಕಟ್ಟೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನಲ್ಲಿ ದಶಕಗಳ ಕಾಲ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇದಲ್ಲದೇ ಕೋಟ ಮತ್ತು ತೆಕ್ಕಟ್ಟೆ ಭಾಗದಲ್ಲಿ ಹಲವು ಸಮಾಜ ಮುಖಿಯಾಗಿ ಸೇವೆ ನೀಡಿ ಚಿರಪರಿಚಿತರಾಗಿ ಸ್ಥಳೀಯರ ಮೂಲಭೂತ ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಇವರ ಸಮಾಜಪರ ಕೆಲಸ ಗುರುತಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆಯವರು ಸನ್ಮಾನಿಸಿದ್ದರು. ಹಲವು ಸೇವಾ ಸಂಸ್ಥೆಗಳಲ್ಲಿ ತೊಡಗಿಕೊಂಡ ಇವರ ಪಾರ್ಥೀವ ಶರೀರ ಬರುವ ಸಂದರ್ಭದಲ್ಲಿ ಸಾವಿರಾರೂ ನಾಗರಿಕರೂ ಭಾಗವಹಿಸಿ ತೆಕ್ಕಟ್ಟೆ ಗ್ರಾಮದ ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಸಂತಾಪ ಸೂಚಿಸಲಾಯಿತು. ಇವರು ಪತ್ನಿ, ತಂದೆ, ತಾಯಿ, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

Comments are closed.