ಪ್ರಮುಖ ವರದಿಗಳು

ವೇಶ್ಯಾವಾಟಿಕೆಯೂ ಒಂದು ಕಾನೂನು ಬದ್ಧ ವೃತ್ತಿ: ಸುಪ್ರೀಂ ಕೋರ್ಟ್ ಅಭಿಪ್ರಾಯ

Pinterest LinkedIn Tumblr

ಹೊಸದಿಲ್ಲಿ: ವೇಶ್ಯಾವಾಟಿಕೆ ಒಂದು ವೃತ್ತಿ. ಕಾನೂನಿನ ಅಡಿ ಲೈಂಗಿಕ ಕಾರ್ಯಕರ್ತೆ ಯರಿಗೂ ಗೌರವಯುತವಾಗಿ ಜೀವಿಸಲು ಮತ್ತು ರಕ್ಷಣೆ ಪಡೆಯಲು ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ಎಲ್‌. ನಾಗೇಶ್ವರ ರಾವ್‌, ನ್ಯಾ| ಬಿ.ಆರ್‌. ಗವಾಯಿ ಮತ್ತು ನ್ಯಾ| ಎ.ಎಸ್‌. ಬೋಪಣ್ಣ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಸಮ್ಮತಿ ಸಹಿತ ವೇಶ್ಯಾ ವಾಟಿಕೆಯಲ್ಲಿ ತೊಡಗಿರುವವರ ವಿರುದ್ಧ ಪೊಲೀಸರು ಕ್ರಿಮಿನಲ್‌ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಪೀಠ ಸೂಚಿಸಿದೆ. ನ್ಯಾಯಪೀಠವು ಲೈಂಗಿಕ ಕಾರ್ಯಕರ್ತೆಯರ ರಕ್ಷಣೆಯ ನಿಮಿತ್ತ ಆರು ನಿರ್ದೇಶನಗಳನ್ನು ನೀಡಿದೆ. ಲೈಂಗಿಕ ಕಾರ್ಯ ಕರ್ತರನ್ನು ಪೊಲೀಸರು ಹಿಂಸಿಸುವುದು ಮತ್ತು ತುಚ್ಛವಾಗಿ ನೋಡುವಂತಿಲ್ಲ ಎಂದಿದೆ.

ದಾಳಿ ನಡೆದಲ್ಲಿ ಅವರನ್ನು ಬಂಧಿಸಬಾರದು, ದಂಡ ವಿಧಿಸಬಾರದು ಎಂದು ಹೇಳಿದೆ. ವೇಶ್ಯಾಗೃಹಗಳನ್ನು ನಡೆಸುವುದು ಕಾನೂನಿನ ಮಿತಿಯಲ್ಲಿ ಅಪರಾಧ. ಆದರೆ ಸ್ವಯಂಪ್ರೇರಿತವಾಗಿ ಲೈಂಗಿಕ ಕಾರ್ಯಕರ್ತೆಯಾಗುವುದು ಅಪರಾಧವಲ್ಲ. ಪ್ರಾಪ್ತ ವಯಸ್ಕರೇ ಲೈಂಗಿಕ ಕಾರ್ಯಕರ್ತರಾಗಿರುವುದರಿಂದ ಅವರು ಸ್ವಯಂ ನಿರ್ಧಾರದಿಂದಲೇ ಈ ವೃತ್ತಿಯನ್ನು ಪ್ರವೇಶಿಸುತ್ತಾರೆ. ಹೀಗಾಗಿ ಪೊಲೀಸರ ಮಧ್ಯಪ್ರದೇಶ ಪ್ರಶ್ನಾರ್ಹ. ಆದ್ದರಿಂದ ಕಾನೂನು ಜಾರಿ ಸಂಸ್ಥೆಗಳು ತಾಳ್ಮೆ ವಹಿಸುವುದು ಅಗತ್ಯ.

ಮಾಧ್ಯಮಗಳು ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ವರದಿ ಮಾಡುವ ಸಂದರ್ಭದಲ್ಲಿ ಅವರ ವಿವರಗಳನ್ನು ಪ್ರಕಟಿಸುವಲ್ಲಿ ವಿವೇಚನೆ ಪ್ರದರ್ಶಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ತಾಯಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಮಗುವನ್ನು ಬೇರ್ಪಡಿಸುವಂತಿಲ್ಲ ಎಂದು ಕೋರ್ಟ್‌ ಹೇಳಿದೆ.

Comments are closed.