ಕರಾವಳಿ

ಮಂಗಳೂರಿನಲ್ಲಿ ಸ್ಯಾಕ್ಸೋಫೋನ್ ವಾದಕಿ ನೇಣಿಗೆ ಶರಣು; ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಶಂಕೆ

Pinterest LinkedIn Tumblr

ಮಂಗಳೂರು: ಸ್ಯಾಕ್ಸೋಫೋನ್ ವಾದಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಶಕ್ತಿನಗರದ ಫ್ಲ್ಯಾಟ್ ವೊಂದರಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಶಕ್ತಿನಗರದ ಫ್ಲ್ಯಾಟ್ ನಲ್ಲಿ ಪತಿ, ತಂದೆ, ತಾಯಿ ಮತ್ತು ಮಗುವಿನೊಂದಿಗೆ ವಾಸವಿದ್ದ ಮೂಲತಃ ಮುಲ್ಕಿಯ ಸ್ಯಾಕ್ಸೊಫೋನ್ ವಾದಕಿ ಸುಜಾತಾ ದೇವಾಡಿಗ (29) ಆತ್ಮಹತ್ಯೆಗೆ ಶರಣಾದವರು.

ತಲೆ ನೋವು ಆಗುತ್ತಿದೆ ಎಂದು ಹೇಳಿ ಕೋಣೆಗೆ ಹೋದವರು ಹೊರಗೆ ಬಾರದಿದ್ದಾಗ ಮನೆಯವರು ಕೋಣೆಯಲ್ಲಿ ಪರಿಶೀಲಿಸಿದಾಗ ಘಟನೆ ತಿಳಿದುಬಂದಿದೆ.

ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಕಂಕನಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.