ಕರಾವಳಿ

ಬಂಧಿಸಲು ಹೋದ ಕೊಣಾಜೆ ಪಿಎಸ್ಐಗೆ ಚೂರಿಯಿಂದ ಇರಿದು ಆರೋಪಿ ಪರಾರಿ

Pinterest LinkedIn Tumblr

ಮಂಗಳೂರು: ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು‌ ಬಂಧಿಸಲು ತೆರಳಿದ್ದ ಕೊಣಾಜೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗೆ ಆರೋಪಿಯೋರ್ವ ಚೂರಿಯಿಂದ ಇರಿದು ಪರಾರಿಯಾದ ಘಟನೆ ಗುರುವಾರ ಮುಂಜಾನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕಾನ ಬಳಿ ನಡೆದಿರುವುದು ವರದಿಯಾಗಿದೆ.

ಕೊಣಾಜೆ‌ ಠಾಣೆಯ ಪಿಎಸ್ಐ ಶರಣಪ್ಪರ ಚೂರಿ ಇರಿತಕ್ಕೊಳಗಾಗಿದ್ದು ಗಾಯಗೊಂಡ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪೊಲೀಸರು ಆರೋಪಿಯ ಸಹೋದರನನ್ನು ವಶಕ್ಕೆ ಪಡೆದಿದ್ದು, ಆರೋಪಿ ಈ ಹಿಂದೆ ಬಂದರು ಠಾಣಾ ಪೊಲೀಸರಿಗೂ ಇದೇ ರೀತಿ ಚೂರಿಯಿಂದ ಇರಿದು ಪರಾರಿಯಾಗಿದ್ದ ಎನ್ನಲಾಗಿದೆ.

ಆತನೊಂದಿಗಿದ್ದ ಸಹೋದರ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ನಾಸಿರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಸಾದಿಕ್ ಈ ಹಿಂದೆ ಬಂದರು ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯ ಸಂದರ್ಭ ಹಿಡಿಯಲು ಹೋದಾಗ ಪೊಲೀಸ್ ಸಿಬ್ಬಂದಿ ವಿನೋದ್ ಮತ್ತು ಪ್ರವೀಣ್ ಎಂಬವರಿಗೆ ಚೂರಿಯಿಂದ ಇರಿದಿದ್ದ ಆರೋಪಿಯಾಗಿದ್ದ.

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುರುವಾರ ಪಜೀರು ಸಮೀಪ ಹಿಡಿಯಲು ಹೋದಾಗ ಆರೋಪಿ ಎರಡನೇ ಬಾರಿಗೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.

ಕೊಣಾಜೆ ಠಾಣಾ ಪೊಲೀಸರು ಪರಾರಿಯಾದ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Comments are closed.