ಕರಾವಳಿ

ಕೊಲ್ಲೂರು ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಭಜರಂಗದಳ, ವಿ.ಹಿಂ.ಪ‌ ಆಗ್ರಹ..!

Pinterest LinkedIn Tumblr

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಂಕಾ ದೇವಸ್ಥಾನದ ವಾರ್ಷಿಕ ಜಾತ್ರೆ ವೇಳೆ ಅನ್ಯಮತೀಯರಿಗೆ ಯಾವುದೇ ವ್ಯಾಪಾರಕ್ಕೆ ಅವಕಾಶ ನೀಡದಂತೆ ಸ್ಥಳೀಯ ಕೊಲ್ಲೂರು ಗ್ರಾಮ ಪಂಚಾಯತಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮನವಿ ಸಲ್ಲಿಸಲಾಯಿತು.

ಮಾ.25ರಂದು ನಡೆಯಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶವನ್ನು ನೀಡಬಾರದು ಎಂಬ ಮನವಿ ಇದಾಗಿದೆ. ಜಾತ್ರೆಯಲ್ಲಿಯೇ ಯುವತಿಯರನ್ನು ಪುಸಲಾಯಿಸುವ ಕೆಲಸವಾಗುತ್ತೆ. ಅವರಿಂದ ಫೋನ್ ನಂಬರ್ ಪಡೆದು ಬಳಿಕ ಲವ್ ಜಿಹಾದ್ ಮಾಡಲಾಗುತ್ತೆ. ಬೈಂದೂರು ವ್ಯಾಪ್ತಿಯಲ್ಲಿ ಇಂತ ಘಟನೆಗಳಾದ ಮಾಹಿತಿಯಿದೆ ಎಂದು ವಿ.ಹಿಂ.ಪ. ಬೈಂದೂರು ತಾಲೂಕು ಅಧ್ಯಕ್ಷ ಜಗದೀಶ್ ಕೊಲ್ಲೂರು ಗಂಭೀರ ಆರೋಪ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಅನ್ಯಕೋಮಿನವರಿಗೆ ಅಂಗಡಿ ತೆರೆಯಲು ಅವಕಾಶ ನೀಡದಿರಲು ಸಂಘಟನೆ‌ ಆಗ್ರಹಿಸಿದ್ದು ಕೊಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಶೆಟ್ಟಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸಂಧ್ಯಾ ರಮೇಶ್ ಹಾಗೂ ಕಿರಣ್ ಜೋಗಿ ಓಂಕಾರ್, ಸಂತೋಷ್ ಉಪಸ್ಥಿತರಿದ್ದರು.

Comments are closed.