ಕರಾವಳಿ

ಗೋ ಕಳ್ಳತನಕ್ಕಾಗಿಯೇ ‘ಟೀಂ ಗರುಡಾ’ ತಂಡ ಮಾಡಿಕೊಂಡಿದ್ದ ನಾಲ್ವರು ಖತರ್ನಾಕ್ ಗೋಕಳ್ಳರ ಬಂಧನ

Pinterest LinkedIn Tumblr

ಉಡುಪಿ: ಇತ್ತೀಚೆಗೆ ನಡೆದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾಪುವಿನ ಮಹಮ್ಮದ್ ಶರೀಪ್‌ ಯಾನೆ ಸ್ಕೊರ್ಪಿಯೊ ಶರೀಪ್‌(34 ), ಕುಂದಾಪುರ ತ್ರಾಸಿಯ ಮುಜಾಹೀದ್‌ ರೆಹಮಾನ್‌ ಯಾನೆ ಸಲ್ಮಾನ್‌(22), ಕೋಟತಟ್ಟು ಪಡುಕೆರೆಯ ಅಬ್ದುಲ್‌ ಮಜೀದ್‌ ಯಾನೆ ಮಜ್ಜಿಮಜ್ಜಿ(22), ಭಟ್ಕಳದ ಸಯ್ಯದ್‌ ಅಕ್ರಮ್‌ ಯಾನೆ ಅಕ್ಕು ಸಯ್ಯದ್‌(22) ಎಂದು ಗುರುತಿಸಲಾಗಿದೆ.

ಬ್ರಹ್ಮಾವರ ಠಾಣಾ ಪೊಲೀಸರ ವಿಶೇಷ ಗಸ್ತಿನಲ್ಲಿದ್ದಾಗ‌ ಮಾ.14 ಬೆಳಿಗ್ಗಿನ ಜಾವ ಒಂದು ಬಿಳಿ ಬಣ್ಣದ ಸ್ಕೂಟಿಯಲ್ಲಿ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಬಾರ್ಕೂರು ರಸ್ತೆಯಿಂದ ಪ್ರಣವ್‌ ಆಸ್ಪತ್ರೆಗೆ ಹೋಗುವ ಒಳ ರಸ್ತೆಗೆ ಹೋಗಲು ಅನುಮಾನಸ್ಪದವಾಗಿ ನಿಂತಿದ್ದ ಒಂದು ಸ್ಕೂಟಿ ಹಾಗೂ ಒಳ ರಸ್ತೆಯಲ್ಲಿದ್ದ ಕಾರನ್ನು ಪರಿಶೀಲಿಸುವಾಗ 4 ಜನ ಆರೋಪಿತರು ತಲವಾರ್ ನೊಂದಿಗೆ ಸೀಟ್‌‌ ಇಲ್ಲದ ಕಾರಿನ್ನಲ್ಲಿದ್ದು ವಿಚಾರಿಸಲಾಗಿ ದನ ಕಳ್ಳತನಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇನ್ನು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳು ಕೃತ್ಯ ನಡೆಸಲು ಉಪಯೋಗಿಸಿದ ಸ್ಕೂಟಿ, ಬಿಳಿ ಸ್ವಿಫ್ಟ್ ಕಾರು, 4 ತಲವಾರು, 2 ಹಗ್ಗಗಳು, ನೀಲಿ ಬಣ್ಣದ ಟರ್ಪಾಲ್‌‌ನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಅಂದಾಜು ಮೌಲ್ಯ ಸುಮಾರು 3,20,000 ಎನ್ನಲಾಗಿದೆ.

ಆರೋಪಿಗಳು ‘ಟೀಂ ಗರುಡಾ’ ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ತೆಗೆದುಕೊಂಡಿದ್ದು, ಪರಸ್ಪರ ಸಂಪರ್ಕಕ್ಕಾಗಿ ಇದೇ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದುದಾಗಿ ತನಿಖೆಯಿಂದ ಕಂಡು ಬಂದಿದೆ.

ಈ ಬಂಧನದಿಂದ ಬ್ರಹ್ಮಾವರ ಪೊಲೀಸ್‌ ಠಾಣೆಯ ದನ ಕಳವು ಪ್ರಕರಣ, ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ‌ನಡೆದ ಜೀವ ಬೆದರಿಕೆ ಪಕರಣ, ಬೈಂದೂರು ಠಾಣೆ ವ್ಯಾಪ್ತಿಯ ಬ್ಯಾಟರಿ ಕಳವು ಪ್ರಕರಣಗಳನ್ನು ಭೇದಿಸಿದಂತಾಗಿದೆ.

ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ವಿಷ್ಣುವರ್ಧನ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿದ್ದಲಿಂಗಪ್ಪ ಮಾರ್ಗದರ್ಶನದಂತೆ ಉಡುಪಿ ಡಿವೈಎಸ್ಪಿ ಸುಧಾಕರ‌ ನಾಯ್ಕ, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಪೊಲೀಸ್‌‌ ಉಪನಿರೀಕ್ಷಕ ಗುರುನಾಥ ಬಿ ಹಾದಿಮನಿ ಹಾಗೂ ಕೋಟ ಪೊಲೀಸ್‌ ಠಾಣೆಯ ಪೊಲೀಸ್‌‌ ಉಪ ನಿರೀಕ್ಷಕ ಮಧು ಅವರೊಂದಿಗೆ ಬ್ರಹ್ಮಾವರ ಪೊಲೀಸ್‌ ಠಾಣೆಯ ಸಿಬ್ಬಂದಿಗಳಾದ ಪ್ರವೀಣ್‌ ಶೆಟ್ಟಿಗಾರ್‌, ರಾಘವೇಂದ್ರ, ಸಂತೋಷ ಶೆಟ್ಟಿ, ಉದಯ ಅಮೀನ್‌, ದಿಲೀಪ್‌‌, ಅಜ್ಮಲ್‌, ಬಶೀರ್‌‌ ಹಾಗೂ ಕೋಟ ಠಾಣೆಯ ಪ್ರಸನ್ನ, ರಾಘವೇಂದ್ರ ಚಾಲಕ ಅಣ್ಣಪ್ಪ ಮತ್ತು ‌ ಮಂಜುನಾಥ ಇವರುಗಳು ಕಾರ್ಯಾಚರಣೆಯಲ್ಲಿದ್ದರು.

 

Comments are closed.