ಕರ್ನಾಟಕ

ಮಾತಿನ ಮಲ್ಲಿ ಆರ್​​.ಜೆ. ರಚನಾ ಹೃದಯಾಘಾತದಿಂದ ನಿಧನ

Pinterest LinkedIn Tumblr

ಬೆಂಗಳೂರು: ರೇಡಿಯೋ ಮಿರ್ಚಿಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ಮಾತಿನ ಮಲ್ಲಿ ಆರ್​​.ಜೆ. ರಚನಾ(39) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇನ್ನು ಕಳೆದ 7 ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ತೊರೆದಿದ್ದ ಅವರು ಮನೆಯಲ್ಲೇ ಏಕಾಂಗಿಯಾಗಿದ್ದರು. ರೆಡಿಯೋ ಮಿರ್ಚಿಯಲ್ಲಿ ಆರ್‌ಜೆ ಆಗಿದ್ದ ರಚನಾ ತಮ್ಮ ಮಾತುಗಳಿಂದಲೇ ಜನರ ಮನ ಗೆದ್ದಿದ್ದರು. ಬಳಿಕ ರೆಡಿಯೋ ಜಾಕಿ ವೃತ್ತಿಗೆ ವಿದಾಯ ಕೋರಿದ್ದ ಅವರು ಮನೆಯಲ್ಲೇ ಇದ್ದರೆನ್ನಲಾಗಿದೆ. ಆದರೆ ಫಿಟ್‌ ಆಂಡ್‌ ಫೈನ್ ಆಗಿದ್ದ ರಚನಾ ಹೃದಯಾಘಾತಕ್ಕೆ ಬಲಿಯಾಗಿರುವುದು ಎಲ್ಲರಿಗೂ ಶಾಕ್ ಕೊಟ್ಟಿದೆ.

ಜೆಪಿ ನಗರದ ಪ್ಲಾಟ್‌ನಲ್ಲಿ ರಚನಾಗೆ ಎದೆ ನೋವು ಕಾಣಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ನಿಧನರಾಗಿದ್ದಾರೆನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಅರ್‌ಜೆ ಕೆಲಸ ಬಿಟ್ಟಿದ್ದ ರಚನಾ ಪೋಷಕರು ಚಾಮರಾಜಪೇಟೆಯಲ್ಲಿದ್ದರು. ಇನ್ನು ರಚನಾ ಪಾರ್ಥೀವ ಶರೀರವನ್ನು ಚಾಮರಾಜ ಪೇಟೆ ನಿವಾಸಕ್ಕೆ ಕೊಂಡೊಯ್ಯುತಿರುವುದಾಗಿ ಬಂಧುಗಳು ತಿಳಿಸಿದ್ದಾರೆ.

ಅರಳು ಹುರಿದಂತೆ ಮಾತನಾಡಿ ಸದಾ ನಗು ನಗುತ್ತಲೇ ಇರುತ್ತಿದ್ದ ರಚನಾಗೆ ಸಾಕಷ್ಟು ಸ್ನೇಹಿತರೂ ಇದ್ದರು. ಇನ್ನು ಸ್ಯಾಂಡಲ್‌ವುಡ್‌ನ ‘ಸಿಂಪಲ್ ಆಗಿ ಒಂದು ಲವ್‌ ಸ್ಟೋರಿ’ ಸಿನಿಮಾದಲ್ಲೂ ಅವರು ಆರ್‌ಜೆಯಾಗಿ ಕಾಣಿಸಿಕೊಂಡಿದ್ದರು.

ರಚನಾ ಅವರ ಸಾವು ರೇಡಿಯೋ ಸ್ನೇಹಿತರಿಗೆ ಶಾಕ್ ತಂದಿದೆ. ಸದಾ ಫಿಟ್ ನೆಸ್ ಬಗ್ಗೆ ಗಮನ ಹರಿಸುತ್ತಿದ್ದು, ಹೃದಯಾಘಾತಕ್ಕೆ ಬಲಿಯಾಗಿರುವುದು ಆಘಾತವುಂಟು ಮಾಡಿದೆ.

 

Comments are closed.