ಕರಾವಳಿ

ಭಜರಂಗದಳ ಕಾರ್ಯಕರ್ತನ ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು: ಯು.ಟಿ ಖಾದರ್ ಒತ್ತಾಯ

Pinterest LinkedIn Tumblr

ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಕಗ್ಗೊಲೆಯಾಗಿರುವ ಘಟನೆಯನ್ನು ಖಂಡಿಸುತ್ತೇನೆ, ಆಡಳಿತ ಪಕ್ಷದ ಹಿರಿಯ ನಾಯಕರು ಇರುವಂತಹ ಜಿಲ್ಲೆಯಲ್ಲಿ ರಾತ್ರೋರಾತ್ರಿ ಈ ಘಟನೆ ನಡೆದಿರುವುದನ್ನು ನೋಡಿದರೆ ಕಿಡಿಗೇಳಿಗಳಿಗೆ ಸರ್ಕಾರದ ಕಾನೂನಿನಲ್ಲಿ, ನಾಯಕರ ಮೇಲೆ ಭಯವಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ ಎಂದು ವಿಧಾನ ಸೌಧದಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕೆಲಸ. ಯಾರದ್ದೋ ತಪ್ಪಿಗೆ ಮುಗ್ಧರಿಗೆ ಅನ್ಯಾಯವಾಗಬಾರದು. ಕೂಡಲೇ ಕೊಲೆ ಆರೋಪಿಗಳನ್ನು ಬಂಧನ ಮಾಡಬೇಕು, ಕೊಲೆಗಾರರನ್ನು ತಕ್ಷಣ ಪತ್ತೆಹಚ್ಚಿ ಶಿಕ್ಷೆಯಾಗುವ ಕೆಲಸವನ್ನು ಸರ್ಕಾರ ಕೂಡಲೇ ಮಾಡಬೇಕು ಎಂದು ಒತ್ತಾಯಿಸಿದರು.

ಕೊಲೆ ಪ್ರಕರಣದಲ್ಲಿ ಯಾರಿದ್ದಾರೋ ಕೂಡಲೇ ಬಂಧಿಸಲಿ. ಈ ಪ್ರಕರಣಕ್ಕೆ ಬೇರೆ-ಬೇರೆ ತಿರುವು ನೀಡುವುದು ಬೇಡ, ಸರ್ಕಾರ ಬಿಗಿ ಕ್ರಮ ಕೈಗೊಳ್ಳದೇ ಇದ್ದರೆ ಕಷ್ಟ. ಕೊಲೆಗಡುಕರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

Comments are closed.