ಕರಾವಳಿ

ಎನ್.ಐ.ಟಿ.ಕೆ ಟೋಲ್ ಗೇಟ್ ವಿರುದ್ಧ ಪ್ರತಿಭಟಿಸುತ್ತಿರುವ ಆಸಿಫ್ ಆಪತ್ಬಾಂಧವ ಮೇಲೆ ಹಲ್ಲೆ ಯತ್ನ; ಆರು ಮಂಗಳಮುಖಿಯರ ಬಂಧನ

Pinterest LinkedIn Tumblr

ಮಂಗಳೂರು: ಎನ್.ಐ.ಟಿ.ಕೆ. ಬಳಿಯಿರುವ ಟೋಲ್‍ ಗೇಟ್ ವಿರುದ್ಧ ಕಳೆದ ಕೆಲ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಆಸಿಫ್‍ ಆಪತ್ಬಾಂಧವ ಅವರ ಮೇಲೆ ಹಲ್ಲೆ ನಡೆಸಿದ 6 ಮಂಗಳಮುಖಿಯರನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಾಸವಿ ಗೌಡ(32), ಲಿಪಿಕಾ (19), ಹಿಮಾ (24), ಆದ್ಯ (22), ಮಾಯಾ (28) ಮತ್ತು ಮೈತ್ರಿ (28) ಎಂದು ಗುರುತಿಸಲಾಗಿದೆ.

ರಾತ್ರಿ 12:30ರ ಸುಮಾರಿಗೆ ಮೊದಲಿಗೆ ಇಬ್ಬರು ಮಂಗಳಮುಖಿಯರು ಆಗಮಿಸಿ ಹಲ್ಲೆಗೆ ಯತ್ನಿಸಿದ್ದರು. ಬಳಿಕ ಸುಮಾರು 10 ಮಂದಿಯಿದ್ದ ಮಂಗಳಮುಖಿಯರ ತಂಡ ಆಗಮಿಸಿ ಧರಣಿನಿರತರನ್ನು ಅವಾಚ್ಯವಾಗಿ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಹಲ್ಲೆಗೂ ಯತ್ನಿಸಿದೆ ಎಂದು ಆರೋಪಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆರು ಮಂದಿ ಮಂಗಳಮುಖಿಯರನ್ನು ಬಂಧಿಸಿದ್ದಾರೆ. ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.