ಕರ್ನಾಟಕ

ದಾಸ ದರ್ಶನ್ ಹುಟ್ಟುಹಬ್ಬ ಈ ಬಾರಿಯೂ ಸಿಂಪಲ್; ಅಭಿಮಾನಿಗಳಿಗೆ ‘ಡಿ-ಬಾಸ್’ ಹೇಳಿದ್ದೇನು?

Pinterest LinkedIn Tumblr

ಬೆಂಗಳೂರು: ಕಳೆದ ವರ್ಷ ನಡೆದ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ನೋವು ತಂದಿದೆ. ಈ ವರ್ಷವೂ ಹುಟ್ಟುಹಬ್ಬದ ಸಂಭ್ರಮ ಬೇಡ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಮಾತನಾಡಿದ ಅವರು, ಫೆ.16 ಹುಟ್ಟುಹಬ್ಬ ನನ್ನದು ಮಾತ್ರವಲ್ಲ, ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಾರೆ. ಆದರೆ ಕಳೆದ ವರ್ಷ ನಡೆದ ಸಂಗತಿಗಳು ನೋವುಂಟು ಮಾಡಿದೆ. ಅದಕ್ಕಾಗಿ ಬರ್ತ್ ಢೇ ಸರಳ ಆಚರಣೆ ಮಾಡುತ್ತೇನೆ. ಅಭಿಮಾನಿಗಳು ನಿರಾಷೆಯಾಗುವುದು ಬೇಡ. ಫೆ. 18ಕ್ಕೆ ‘ಮೆಜೆಸ್ಟಿಕ್’ ಸಿನಿಮಾ ಮತ್ತೆ ರಿಲೀಸ್‌ ಆಗಲಿದೆ ಎಂದರು.

“ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. 2021ರ ಕರಾಳ ದಿನಗಳು ಮತ್ತೆ ಮರುಕಳಿಸದಿರಲಿ, ಕೋವಿಡ್ ಇಂದ ಸಂಪೂರ್ಣವಾಗಿ ನಮ್ಮ ಜನತೆ ಚೇತರಿಸಿಕೊಳ್ಳಲಿ ಎಂಬ ಕಾರಣದಿಂದ ನನ್ನ ಹುಟ್ಟುಹಬ್ಬವನ್ನು ಈ ಬಾರಿಯೂ ಸಹ ಸರಳವಾಗಿರಲೆಂದು ನಿರ್ಧರಿಸಿದ್ದೇನೆ. ಈ ಬಾರಿಯೂ ಬೆಂಗಳೂರಿನಲ್ಲಿ ನಾನು ಈ ಸಮಯದಲ್ಲಿರುವುದಿಲ್ಲ. ಬಹಳಷ್ಟು ದೂರದಿಂದ ಮನೆಯ ಹತ್ತಿರ ಬಂದು ನಿರಾಶರಾಗದಿರಿ. ನಿಮ್ಮೆಲ್ಲರನ್ನು ನೋಡಿ ಮುಖಾಮುಖಿಯಾಗುವ ಹಂಬಲವೂ ನನಗೂ ಸಾಕಷ್ಟಿದೆ. ಇವೆಲ್ಲದಕ್ಕೂ ಸದ್ಯದ ಪರಿಸ್ಥಿತಿ ಸೂಕ್ತವಲ್ಲವೆಂಬುದು ನನ್ನ ಭಾವನೆ. ಆದಷ್ಟು ಬೇಗ ನಿಮ್ಮೆಲ್ಲರನ್ನು ಭೇಟಿ ಮಾಡುವೆ ಎಂದು ನಂಬಿದ್ದೇನೆ.
ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಅಭಿಮಾನ ಇಟ್ಟಿರುವ ನೀವು ನನ್ನ ಈ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ.ಇಂತಿ ನಿಮ್ಮ ಪ್ರೀತಿಯ ದಾಸ ದರ್ಶನ್” ಎಂದು ಅವರು ಬರೆದುಕೊಂಡಿದ್ದಾರೆ.

Comments are closed.