ಕರಾವಳಿ

ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ 22 ವರ್ಷ ಪ್ರಾಯದ ವಿಪ್ರೋ ಕಂಪೆನಿ ಉದ್ಯೋಗಿ ಯುವತಿ

Pinterest LinkedIn Tumblr

ಉಡುಪಿ: ವಿಪ್ರೋ ಕಂಪೆನಿಯ ಉದ್ಯೋಗಿಯಾಗಿದ್ದ ಯುವತಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಉಡುಪಿ‌ ಜಿಲ್ಲೆಯ ಪಡುಬಿದ್ರಿಯ ಬ್ರಹ್ಮಸ್ಥಾನ ಬಳಿ ನಡೆದಿದೆ.

ಇಲ್ಲಿನ ನಿವಾಸಿ ಸೌಜನ್ಯ (22) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಈಕೆ ಹೈದರಾಬಾದ್‍ನ ವಿಪ್ರೊ ಕಂಪೆನಿಯಲ್ಲಿ ದುಡಿಯುತ್ತಿದ್ದು ಕೊರೋನ ಕಾರಣಗಳಿಗಾಗಿ ಕಳೆದ 10 ತಿಂಗಳುಗಳಿಂದ ಈಕೆ ಮನೆಯಿಂದಲೇ ಕೆಲಸ ಮಾಡಿಕೊಂಡಿದ್ದರು. ಇಂದು ತನ್ನ ತಂದೆ ತಾಯಿ ಇಬ್ಬರೂ ಸುರತ್ಕಲ್‍ಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ತಾನು ಕೆಲಸ ಮಾಡಿಕೊಂಡಿದ್ದ ಕೋಣೆಯಲ್ಲೇ ಈ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಾಹ್ನದ ವೇಳೆ ಹೆತ್ತವರು ಹಿಂತಿರುಗಿ ಬಂದಾಗಲೇ ಘಟನೆ ಬೆಳಕಿಗೆ ಬಂದಿದೆ. ಡೆತ್ ಕೂಡ ಪತ್ತೆಯಾಗಿದೆ ಎಂಬ ಮಾಹಿತಿಯಿದೆ.

Comments are closed.