ಕರಾವಳಿ

ಉಡುಪಿಯಲ್ಲಿ ಹಿಜಾಬ್, ಕೇಸರಿ ವಿವಾದ; ಕೇಸರಿ ಪೇಟ ಧರಿಸಿ ಬಂದ ವಿದ್ಯಾರ್ಥಿಗಳು; ಉದ್ವಿಗ್ವ ಪರಿಸ್ಥಿತಿ ನಿರ್ಮಾಣ- ಎಂಜಿಎಂ ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ

Pinterest LinkedIn Tumblr

ಉಡುಪಿ: ಕರಾವಳಿಯಾದ್ಯಂತ ಹಿಜಾಬ್, ಕೇಸರಿ ಶಾಲು ವಿವಾದ ಜೋರಾಗಿದ್ದು ಎಂಜಿಎಂ ಕಾಲೇಜಿನಲ್ಲಿ ಬುರ್ಖಾ, ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬಂದರೆ, ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲಿನೊಂದಿಗೆ ಕಾಲೇಜಿಗೆ ಆಗಮಿಸಿದ್ದು ಉದ್ವಿಗ್ವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ತಾರಕಕ್ಕೇರುತ್ತಿದ್ದಂತೆಯೇ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ ಮಾಡಲಾಗಿದೆ.

ವಿದ್ಯಾರ್ಥಿನಿಯರು ಬುರ್ಖಾ, ಹಿಜಬ್ ಧರಿಸಿ ಬಂದಿದ್ದು, ಕೇಸರಿ ಪೇಟ, ಕೇಸರಿ ಶಾಲು ತೊಟ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದಾರೆ. ಈ ವೇಳೆ ಆಡಳಿತ ಮಂಡಳಿ ಗೇಟ್ ಗೆ ಬೀಗ ಹಾಕಿದ್ದಾರೆ.

ಇನ್ನು ರೆಸ್ಟ್‌‌ರೂಮ್ ನಲ್ಲಿ ಬುರ್ಖಾ ತೆಗೆದಿರಲು ಕಾಲೇಜು ಸೂಚನೆ ನೀಡಿದ್ದು, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ಗೆ ಅವಕಾಶ ನೀಡಿದರೆ ನಮಗೂ ಕೇಸರಿ ಶಾಲು ಧರಿಸಲು ಅವಕಾಶ ನೀಡಿ ಎಂದು ಒತ್ತಾಯಿಸಿದ್ದು, ಹಿಜಾಬ್ ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತಾ ಮುಸ್ಲಿಂ ವಿದ್ಯಾರ್ಥಿನಿಯರ ಪ್ರತಿಭಟನೆ ನಡೆಸುತ್ತಿದ್ದು, ಕಾಲೇಜು ಆವರಣ ಒಳಗಡೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಪ್ರಾಂಶುಪಾಲ ಡಾ. ದೇವಿದಾಸ್ ನಾಯಕ್ ಆಗಮಿಸಿದ್ದು, ಪ್ರಾಧ್ಯಾಪಕರು ಕೂಡ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರೂ ಅದು ವಿಫಲವಾಗಿದೆ.

 

Comments are closed.