ಕರಾವಳಿ

ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಲಾಡ್ಜ್’ನಲ್ಲಿ ಹೈಟೆಕ್ ವೇಶ್ಯಾವಾಟಿಕೆ; ನಾಲ್ವರ ಬಂಧನ

Pinterest LinkedIn Tumblr

ಉಡುಪಿ: ಸರ್ವಿಸ್ ಬಸ್ ನಿಲ್ದಾಣದ ಬಳಿ ಲಾಡ್ಜ್ ಒಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಹುಡುಗಿಯರನ್ನು ವಶಕ್ಕೆ ಪಡೆದಿದ್ದಾರೆ.

ಉಡುಪಿ ನಗರದ ಹೃದಯ ಭಾಗದಲ್ಲಿ ಇರುವ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಮಾಹಿತಿ ಮೇರೆಗೆ ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಮತ್ತು ಅವರ ತಂಡ ದಾಳಿ‌ ನಡೆಸಿ, ಇಬ್ಬರು ಹುಡುಗಿಯರು ಮತ್ತು ನಾಲ್ಕು ಮಂದಿ‌ ಆರೋಪಿಗಳನ್ನು ಬಂಧಿಸಿದ್ದಾರೆ.

ಉಡುಪಿ ಪೊಲೀಸರಿಂದ ಬಂಧಿತರಾದ ಆರೋಪಿಗಳು ಗುರುರಾಜ್, ವಿಜಯ ಶೆಟ್ಟಿ, ಹೇಮಂತ್, ಸಂದೀಪ್ ಮೊಗವೀರ ಎಂದು ತಿಳಿದು ಬಂದಿದೆ. ಲಾಡ್ಜ್ ಮಾಲಕ ರಮೇಶ್ ಶೆಟ್ಟಿ ಮೇಲೂ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರಿಗೆ ಕೆಲವು ಸಮಯದಿಂದ ಇಲ್ಲಿ‌ಅನೈತಿಕ ದಂಧೆ ನಡೆಯುತ್ತಿದೆ ಎಂದು ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ಜಯಂತ್ ಮತ್ತು ತಂಡ ಐದು ಮಂದಿ ಮೇಲೆ ಕೇಸು ದಾಖಲಿಸಿಕೊಂಡು ನಾಲ್ಕು ಮಂದಿ ಬಂಧಿತರ ವಿಚಾರಣೆ ನಡೆಸುತ್ತಿದ್ದಾರೆ.

Comments are closed.