ಕರ್ನಾಟಕ

ನಂದಿನ ಹಾಲಿನ ಪ್ಯಾಕೇಟ್​ ಮೇಲೆ ಅಪ್ಪು ಫೋಟೋ; ಕೆ.ಎಂ.ಎಫ್ ಕಾರ್ಯಕ್ಕೆ ಅಭಿಮಾನಿಗಳ ಮೆಚ್ಚುಗೆ

Pinterest LinkedIn Tumblr

ಬೆಂಗಳೂರು: ಕನ್ನಡ ಚಿತ್ರರಂಗದ ಪವರ್​ ಸ್ಟಾರ್​, ಅಭಿಮಾನಿಗಳ ಪಾಲಿನ‌ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಿಧನರಾಗಿ ಎರಡು ತಿಂಗಳು ಕಳೆದಿವೆ. ಪ್ರತಿದಿನ ಅಪ್ಪು ಅವರನ್ನು ನೆನೆಯುವ ಹಾಗೂ ಗೌರವ ಸಲ್ಲಿಸುವ ಕೆಲಸಗಳು ನಡೆಯುತ್ತಲೇ ಇದೆ. ಇದೀಗ ಕೆಎಂಎಫ್​ ಕೂಡ ಅಪ್ಪು ಅವರಿಗೆ ವಿಶೇಷವಾಗಿ ಗೌರವ ಸಲ್ಲಿಸಿದೆ. ಇದನ್ನು ಕಂಡ ಅಭಿಮಾನಿಗಳು ಭಾವುಕರಾಗಿದ್ದಾರೆ. ಯಾವುದೇ ಹಣ ಪಡೆಯದೇ ಅಪ್ಪು ನಂದಿನಿ ಜಾಹೀರಾತಿನಲ್ಲಿ ನಟಿಸಿದ್ದರು. ಬ್ರ್ಯಾಂಡ್​ ಅಂಬಾಸಿಡರ್ ​ಆಗಿದ್ದರು. ಹಾಗಾಗಿ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ.

ನಂದಿನ ಹಾಲಿನ ಪ್ಯಾಕೆಟ್ ಮೇಲೆ ನಗು ಮುಖದ ಸರದಾರ ಪುನೀತ್ ರಾಜ್​ಕುಮಾರ್ ಭಾವಚಿತ್ರವನ್ನು ಮುದ್ರಿಸುವ ಮೂಲಕ ವಿಶೇಷ ಗೌರವವನ್ನ ನೀಡಲಾಗಿದೆ. ಅಂದು ನಂದಿನಿ ಹಾಲಿನ ಜಾಹೀರಾತು ರಾಯಭಾರಿಯಾಗಿದ್ದ ಡಾ. ರಾಜ್​ಕುಮಾರ್, ಯಾವುದೇ ಸಂಭಾವನೆ ತೆಗೆದುಕೊಳ್ಳದೆ ರೈತರ ಪರ ನಿಂತಿದ್ದರು. ಪುನೀತ್​ ರಾಜ್​ಕುಮಾರ್​ ಕೂಡ ಅಣ್ಣಾವ್ರ ಹಾದಿಯನ್ನು ಹಿಡಿದ್ದಿದ್ದರು. ಹೀಗಾಗಿ ಕೆಎಂಎಫ್​ ವಿಶೇಷವಾಗಿ ಅಪ್ಪುಗೆ ಗೌರವ ಸಲ್ಲಿಸಿದೆ.

Comments are closed.