ಕರ್ನಾಟಕ

ಜನರೇಟರ್ ಬ್ಲಾಸ್ಟ್: ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ದಳ‌ ಸಿಬ್ಬಂದಿ ಸಾವು

Pinterest LinkedIn Tumblr

ಕಲಬುರ್ಗಿ: ನಗರದ ಸುಪರ್ ಮಾರ್ಕೆಟ್ ನಲ್ಲಿರುವ ಕೆನರಾ ಬ್ಯಾಂಕ್ ನ ಜನರೇಟರ್ ಬ್ಲಾಸ್ಟ್ ಆಗಿರುವ ಘಟನೆ ನಡೆದಿದೆ. ಬ್ಲಾಸ್ಟ್ ಸಂಭವಿಸಿದ ಸಂದರ್ಭದಲ್ಲಿ ಬೆಂಕಿ‌ ನಂದಿಸಲು ಹೋಗಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ರಮೇಶ್ ಪವಾರ್ (56) ಸಾವನ್ನಪ್ಪಿದ್ದಾರೆ.

ಕೆನರಾ ಬ್ಯಾಂಕ್ ಹಿಂಬಾಗದಲ್ಲಿರುವ ಜನರೇಟರ್ ಕೋಣೆಯಲ್ಲಿ, ಈ ಅವಘಡ ಸಂಭವಿಸಿದೆ. ಜನರೇಟರ್ ಸಲುವಾಗಿ ಪ್ರತ್ಯೇಕ ಕೋಣೆ ನಿರ್ಮಾಣ ಮಾಡಲಾಗಿತ್ತು.

ಸಂಜೆ 7 ಗಂಟೆಯ ಸುಮಾರಿಗೆ ಏಕಾಎಕಿ ಜನರೇಟರ್ ಬ್ಲಾಸ್ಟ್ ಆಗಿ ಹೊತ್ತು ಉರಿದಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಜನರೇಟರ್ ಬ್ಲಾಸ್ಟ್ ಆದಾಗ ಬೆಂಕಿ ಆರಿಸುವುದಕ್ಕೆ ಹೋದಾಗ ಲೋ ಬಿಪಿಯಾಗಿದ್ದ ಸಂದರ್ಭದಲ್ಲಿ ರಮೇಶ್ ಪವಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಬ್ರಹ್ಮಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.