ಮಂಗಳೂರು: ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕುತ್ತಾರ್ ಬಳಿಕ ಅಪಾರ್ಟ್‌ಮೆಂಟ್ ನಲ್ಲಿ ಭಾನುವಾರ ನಡೆದಿದೆ.
ಬೀದರ್ ಮೂಲದ ವಿಜಯ್ ಕುಮಾರ್ ಗಾಯಕ್ವಾಡ್ ಅವರ ಪುತ್ರಿ ವೈಶಾಲಿ ಗಾಯಕ್ವಾಡ್ (25) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಇವರು ಖಾಸಗಿ ಮೆಡಿಕಲ್ ಕಾಲೇಜೊಂದರಲ್ಲಿ ಎಂಬಿಬಿಎಸ್ ಇಂಟರ್ನ್ ಶಿಪ್ ಮಾಡುತ್ತಿದ್ದರು.
ಕುತ್ತಾರ್ ಬಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ತನ್ನ ಸಹಪಾಠಿಯ ಜೊತೆ ವಾಸವಾಗಿದ್ದಳು. ಆದರೆ, ಶನಿವಾರದಂದು ಇಬ್ಬರೂ ಕೂಡ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದು ಭಾನುವಾರದಂದು ವೈಶಾಲಿ ರೂಂನಿಂದ ಹೊರಬರದಿದ್ದ ಸಂದರ್ಭದಲ್ಲಿ ಸಹಪಾಠಿ ವಿದ್ಯಾರ್ಥಿನಿ ಗಾಬರಿಗೊಂಡು ಪರಿಶೀಲಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.