ಕರ್ನಾಟಕ

ಬೆಳಗಾವಿ ಅಧಿವೇಶನಕ್ಕೆ ‌ಬಂದ ವಾಹನಗಳ ಮೇಲೆ ಕಲ್ಲು ತೂರಾಟ: 27 ಮಂದಿ ಬಂಧನ

Pinterest LinkedIn Tumblr

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ಬಂದಿರುವ ವಾಹನಗಳ ಮೇಲೆ ಶುಕ್ರವಾರ ರಾತ್ರಿ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 27 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆ, ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತರಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ನಗರದಾದ್ಯಂತ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಯಾದಗಿರಿ ಸಿಪಿಐ ಜೀಪ್ ಸೇರಿದಂತೆ ನಾಲ್ಕು ಪೊಲೀಸ್ ವಾಹನಗಳು, ನಾಲ್ಕು ಸರ್ಕಾರಿ ಕಾರುಗಳು ಹಾಗೂ ಸಿನಿಮಾ ನೋಡಲು ಬಂದಿದ್ದ ಮೂರು ಕಾರುಗಳು ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಲಾಗಿದೆ. ಬೆಳಗಾವಿ ನಗರದ ಸೂರ್ಯಾ ಯಾತ್ರಿ ನಿವಾಸ ಎದುರು ನಿಲ್ಲಿಸಿದ್ದ ಪೊಲೀಸ್ ಜೀಪ್ ಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.

Comments are closed.