ಕರ್ನಾಟಕ

ಮನೆ, ಗ್ರಾಮಪಂಚಾಯತಿ, ಅಂಚೆ ಕಚೇರಿಯಲ್ಲಿ ಕಳವು ಮಾಡಿದ್ದ ನಟೋರಿಯಸ್ ಆರೋಪಿಗಳಿಬ್ಬರನ್ನು ಬಂಧಿಸಿದ ವಿರಾಜಪೇಟೆ ಪೊಲೀಸರು

Pinterest LinkedIn Tumblr

ಮಡಿಕೇರಿ: ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

(ಸಾಂದರ್ಭಿಕ ಚಿತ್ರ)

ಕೊಡಗು ಜಿಲ್ಲೆಯ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ದೇವಣಗೇರಿ ಗ್ರಾಮದ ನಿವಾಸಿಯೊಬ್ಬರ ಮನೆಯ ಮನೆಯ ಹಿಂದಿನ ಬಾಗಿಲನ್ನು ಮುರಿದು ಮನೆಗೆ ಪ್ರವೇಶ ಮಾಡಿ ಒಟ್ಟು 64 ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಮಾಡಿದ ಪ್ರಕರಣ ಹಾಗು ಕದನೂರು ಗ್ರಾಮ ಪಂಚಾಯ್ತಿ ಕಛೇರಿಗೆ ನುಗ್ಗಿ ಕಂಪ್ಯೂಟರ್, ಮಾನಿಟರ್ ಮತ್ತು ಸಿಸಿ ಕ್ಯಾಮೆರಾ ಹಾಗು ಕದನೂರು ಅಂಚೆ ಕಛೇರಿಯಿಂದ ಮೊಬೈಲ್ ಕಳ್ಳತನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ.

ವಿರಾಜಪೇಟೆ ತಾಲ್ಲೂಕು ದೇವಣಗೇರಿ ಗ್ರಾಮದ ಹೆಚ್.ಕೆ.ನವೀನ್ ಅಲಿಯಾಸ್ ಪಾಪುಣ್ಣಿ, ವಿರಾಜಪೇಟೆ ಶೆಟ್ಟಿಗೇರಿ ಗ್ರಾಮದ ಕಡೆಮಾಡ ನವೀನ್ ಅಲಿಯಾಸ್ ಕಾರ್ಯಪ್ಪ ಬಿ. ಎಂಬವರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳಿಂದ 61 ಗ್ರಾಂ. ಚಿನ್ನಾಭರಣ, ಗ್ರಾಮ ಪಂಚಾಯ್ತಿಗೆ ಸೇರಿದ ಒಂದು ಕಂಪ್ಯೂಟರ್, ಒಂದು ಮಾನಿಟರ್ ಮತ್ತು ಒಂದು ಸಿಸಿ ಕ್ಯಾಮೆರಾ ಹಾಗು ಕದನೂರು ಅಂಚೆ ಕಚೇರಿಯಿಂದ ಕಳ್ಳತನ ಮಾಡಿದ ಒಂದು ಮೊಬೈಲ್ ನ್ನು ವಿರಾಜಪೇಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯು ಮೇಲಧಿಕಾರಿಯವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ವೃತ್ತದ ಸಿಪಿಐ ಶ್ರೀಧರ್ ನೇತೃತ್ವದಲ್ಲಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್ಐ ಸಿದ್ದಲಿಂಗ ಬಾಣಸೇ ಹಾಗು ಸಿಬ್ಬಂದಿಗಳಾದ ವಿರಾಜಪೇಟೆ ನಗರ ಠಾಣೆಯ ಗಿರೀಶ್, ಮುಸ್ತಾಫ, ಟಿ.ಟಿ. ಮಧು, ಟಿ.ಕೆ. ರವಿ, ವಿರಾಜಪೇಟೆ ಗ್ರಾಮಾಂತರ ಠಾಣೆಯ ರಾಮಪ್ಪ, ಶ್ರೀಕಾಂತ್ ಕೆಂದೂರ ರವರುಗಳು ಭಾಗಿಯಾಗಿದ್ದರು. ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನುಕೊಡಗು ಎಸ್ಪಿ ಪ್ರಶಂಸಿಸಿದ್ದಾರೆ.

Comments are closed.