ಮಂಗಳೂರು: ಇಲ್ಲಿನ ನೀರುಮಾರ್ಗ ಸಮೀಪದ ಪಡು ಪೋಸ್ಟ್ ಆಫೀಸ್ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಮಹಮ್ಮದ್ ರಿಯಾಜ್ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವಿತ್ ರಂಗಪಾದೆ, ಗಣೆಶ್, ಚೇತನ್, ಪರೀಕ್ಷಿತ್ ಪಡು ಸೇರಿದಂತೆ ಐದು ಮಂದಿಯನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆ ಹಿನ್ನೆಲೆ….
ಡಿಸೆಂಬರ್ 10ರ ಶುಕ್ರವಾರ ಪಡು ಎಂಬಲ್ಲಿ ಕಾರಿನಲ್ಲಿದ್ದ ಸ್ಥಳೀಯ ನಿವಾಸಿಗೆ ಅಬ್ದುಲ್ ರಜಾಕ್ ಗೆ ಕಾರಿನಲ್ಲಿ ಬಂದ ತಂಡ ಚೂರಿ ಇರಿದು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹಲ್ಲೆಯಿಂದಾಗಿ ರಿಯಾಝ್‌ರ ತಲೆ, ಕಣ್ಣಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಪರಿಶೀಲನೆ ವೇಳೆ ಅಬ್ದುಲ್ ರಜಾಕ್ ಸಂಬಂಧಿಸಿದ ರಿಟ್ಜ್ ಕಾರಿನಲ್ಲಿ ಮಹಿಳೆ ಧರಿಸುವ ಒಂದು ಜತೆ ಚಪ್ಪಲಿ ಹಾಗೂ ಮಹಿಳೆಗೆ ಸಂಬಂಧಿಸಿದ ಇತರ ವಸ್ತುಗಳು ಪತ್ತೆಯಾಗಿತ್ತು.
Comments are closed.