ಕರಾವಳಿ

ವಿಧಾನ‌ಪರಿಷತ್ ದ.ಕ ದ್ವಿಸದಸ್ಯ ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ್ ಭಂಡಾರಿಗೆ ಜಯ

Pinterest LinkedIn Tumblr

ಮಂಗಳೂರು: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಂಜುನಾಥ್ ಭಂಡಾರಿ ಜಯಗಳಿಸಿದ್ದಾರೆ.

ಒಟ್ಟು 389 ಮತಗಟ್ಟೆಗಳ 6,011 ಮತಗಳ ಪೈಕಿ, ಬಿಜೆಪಿ ಕೋಟ ಶ್ರೀನಿವಾಸ್ ಪೂಜಾರಿ 3672 ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್ ಭಂಡಾರಿ 2079 ಮತಗಳನ್ನು ಪಡೆದು ಪ್ರಥಮ ಪ್ರಾಶಸ್ತ್ಯದಲ್ಲಿ ಜಯಗಳಿಸಿದ್ದಾರೆ. ಇನ್ನು ಎಸ್.ಡಿ.ಪಿ.ಐ ಅಭ್ಯರ್ಥಿ ಶಾಫಿ.ಕೆ 204 ಮತಗಳನ್ನು ಪಡೆದಿದ್ದಾರೆ. 6,011 ಮತಗಳ ಪೈಕಿ 5,955 ಸಿಂಧು ಮತಗಳು ಚಲಾವಣೆ ಆಗಿದೆ. 56 ಅಸಿಂಧು ಮತಗಳಾಗಿವೆ.

ಉಡುಪಿ‌ ಜಿಲ್ಲೆ ಕೋಟ ಮೂಲದ ಹಾಲಿ ಸಚಿವರೂ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ಈ ಗೆಲುವಿನಿಂದ ಸತತ ನಾಲ್ಕನೇ ಬಾರಿ ವಿಧಾನ ಪರಿಷತ್ ಪ್ರವೇಶ ಮಾಡಿದ್ದಾರೆ.

Comments are closed.