ಕರಾವಳಿ

ಅಕ್ರಮ ಮರಳು ಸಾಗಣೆ ಸಂಬಂಧಿತ ಸಮಸ್ಯೆಗಳಿಗೆ ಉಡುಪಿ ಜಿಲ್ಲೆಯಲ್ಲಿ 24×7 ಕಂಟ್ರೋಲ್ ರೂಂ: ಡಿಸಿ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಕುರಿತು ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕ್ಷಿಪ್ರವಾಗಿ ಸ್ಪಂದಿಸಿ ಅಕ್ರಮ ಮರಳು ಸಾಗಣೆ ಹಾಗೂ ಸಂಬಂಧಿತ ಸಮಸ್ಯೆಗಳಿಗೆ 24×7 ಕಂಟ್ರೋಲ್ ರೂಂ ಆರಂಭಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಲ್ಲೆಯಲ್ಲಿ ಜಿಪಿಎಸ್ ದೋಷಗಳ ಬಗ್ಗೆ ನಿಗಾ ಇಡಲು ಜಿಪಿಎಸ್ ಮಾನಿಟರಿಂಗ್ ಸೆಂಟರ್ ಸ್ಥಾಪಿಸಲಾಗಿದ್ದು, ಗಣಿಗಾರಿಕೆ ವಸ್ತುಗಳ ದಾಸ್ತಾನು/ ಸಾಗಾಣಿಕೆ ಕುರಿತು ದೂರು ಸ್ವೀಕರಿಸಲು 24×7 ಕಂಟ್ರೋಲ್ ರೂಂ ತೆರೆಯಲಾಗಿದ್ದು, ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ 0820-2950088 ಎಂದು ತಿಳಿಸಿದ್ದಾರೆ.

ಕುಂದಾಪುರ, ಉಡುಪಿ ಮತ್ತು ಬ್ರಹ್ಮಾವರದಲ್ಲಿ ಮರಳು ದಂಧೆಯನ್ನು ನಿಲ್ಲಿಸಿ ನಾನ್-ಸಿಆರ್‌ಝೆಡ್‌ನಲ್ಲಿ ಮರಳು ಪೂರೈಕೆ ಪ್ರಕ್ರಿಯೆಯಲ್ಲಿದೆ. ಉಡುಪಿ ಇ-ಸ್ಯಾಂಡ್ ಅಪ್ಲಿಕೇಶನ್‌ನಲ್ಲಿ ಮರಳು ಲಭ್ಯವಿದ್ದು, ಆನ್‌ಲೈನ್ ಪಾವತಿ ಮಾಡುವ ಮೂಲಕ ಇದನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

 

Comments are closed.